ಬೆಂಗಳೂರು ಮನುಷ್ಯನ ಜೀವನದಲ್ಲಿ ಗುರುಗಳ ಪಾತ್ರ ಅಪಾರವಾದದ್ದು,ಪ್ರತಿಯೊಬ್ಬರೂ ಸಹ ವಿದ್ಯೆ ಕಲಿಸಿದ ಗುರುಗಳನ್ನು ಸದಾ ಸ್ಮರಿಸಬೇಕಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ ಗೋಪಾಲಯ್ಯ ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಹಾಲಕ್ಷ್ಮಿಪುರಂನ ನ್ಯೂ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲ್ಲಿ ಆಯೋಜಿಸಿದ್ದ ಕಲಾ ಸಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಬೇಕು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಆಗಬೇಕು ಆಗ ಮಾತ್ರ ಉತ್ತಮ ಸಂಸ್ಕಾರವನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಪಡೆದು ತಮ್ಮ ಗುರಿಯನ್ನು ತಲುಪಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಇದಕ್ಕಿಂತ ಮೊದಲು ಸಂಸ್ಕಾರವನ್ನು ಕಲಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕ ಕೆ ಗೋಪಾಲಯ್ಯ ಕಿವಿಮಾತು ಹೇಳಿದರು.
ನ್ಯೂ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಈ ಭಾಗದ ಅತ್ಯುತ್ತಮ ಶಾಲೆಯಾಗಿದೆ. ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರವನ್ನು ಕಲಿಸುತ್ತಿದೆ ಇದನ್ನ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ರಾಮನಗೌಡ ವಿ ನಾಡಗೌಡ, ಕ್ಯಾಡಬಮ್ಸ್ ಗ್ರೂಪ್ ನ ಸಹಾಯಕ ನಿರ್ದೇಶಕಿ ಡಾ.ಅನಿತಾ ಭರತನ್, ಇಸ್ರೋ ನಿರ್ವಹಣಾ ನಿರ್ದೇಶನಾಲಯದ ವಿಜ್ಞಾನಿ
ರಾಜೀವ್ ಚೇತ್ವಾನಿ, ಸಂಸ್ಥೆಯ ಕಾರ್ಯದರ್ಶಿ ಗಾಯತ್ರಿ, ಪ್ರಾಂಶುಪಾಲ ಗಾರ್ಗಿ ಚೌಧರಿ ಹಾಗೂ ಮಾಜಿ ಉಪಮೇಯರ್ ಎಸ್.ಹರೀಶ್ ಹಾಗೂ ಇತರರು ಹಾಜರಿದ್ದರು.








