ಚಿಕ್ಕಮಗಳೂರು: ಜಿಲ್ಲೆಯ ಪ್ರತಿಷ್ಠೆಯ ಕಣವಾಗಿದ್ದ ಇಲ್ಲಿನ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ NDA ತ್ರಿಕೂಟ ಕ್ಲೀನ್ ಸ್ವೀಪ್ ಮಾಡಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. 13 ನಿರ್ದೇಶಕರಲ್ಲಿ 11 ಬಿಜೆಪಿ, ಜೆಡಿಎಸ್ 2ರಲ್ಲಿ ಗೆಲುವು ಲಭಿಸಿದೆ. ಹಾಲಿ ಕಾಂಗ್ರೆಸ್ ಶಾಸಕ ಕಡೂರಿನ ಕೆ.ಎಸ್.ಆನಂದ್ ಗೆ ಸೋಲಾಗಿದೆ. ಐವರು ಕಾಂಗ್ರೆಸ್ ಶಾಸಕರಿದ್ದರೂ ಕಾಂಗ್ರೆಸ್ ಶಾಸಕರು ಸೋಲು ಕಂಡಿದ್ದಾರೆ.
ಚಿಕ್ಕಮಗಳಊರು ವ್ಯವಸಾಯೋತ್ಪನ್ನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಕಡೂರು ಶಾಸಕ ಕೆ.ಎಸ್.ಆನಂದ್, ಕೊಪ್ಪ ಬಿಜೆಪಿ ಮುಖಂಡ ದಿನೇಶ್ ಹೊಸೂರು ಎದುರು ಸೋಲು ಕಂಡಿದ್ದಾರೆ. ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿಗೂ ಸೋಲುಂಡಿದ್ದಾರೆ. ಪ್ರಾಥಮಿಕ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಸಹಕಾರ ಸಂಘದಿಂದ ಎಂ.ಪಿ ಕುಮಾರಸ್ವಾಮಿ ಸ್ಪರ್ಧಿಸಿದ್ದರು.
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ ?
ಭೋಜೇಗೌಡ -30 ಗೆಲುವು
Ct ರವಿ -27 ಗೆಲುವು
ನಿರಂಜನ್ -05 ಸೋಲು
ಪ್ರಜ್ವಲ್ -05
ಸತೀಶ್ -06
ರವೀಂದ್ರ -00
Invalid-01
ಆನಂದ್-03 ಸೋಲು
ದಿನೇಶ್-04 ಗೆಲುವು
T L ರಮೇಶ್-56 ಗೆಲುವು
ಕುಮಾರಸ್ವಾಮಿ-38 ಸೋಲು
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳಾಪಟ್ಟಿ ಪ್ರಕಟ
ಭರತ್ ರೆಡ್ಡಿಗೆ ಜನಾರ್ಥನ ರೆಡ್ಡಿ ಮನೆ ಸುಟ್ಟು ಹಾಕುವಷ್ಟು ತಾಕತ್ತಿದೆಯೇ?: ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ








