ದೊಡ್ಡಬಳ್ಳಾಪುರ: ರಾಮಯ್ಯನಪಾಳ್ಯ ಫಾರ್ಮ್ ಹೌಸ್ ನಲ್ಲಿ ನಟ ಪ್ರಥಮ್ ಗೆ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ಬಂಧನ ಕೂಡ ಆಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಜಾಮೀನು ಪಡೆದು ಹೊರಗೆ ಬಂದ ನಂತ್ರವೂ ಧಮ್ಕಿ ಹಾಕಿದ್ದರಿಂದ, ಜಾಮೀನು ರದ್ದುಗೊಳಿಸಿ ನ್ಯಾಯಾಧೀಶರು ಜೈಲಿಗೆ ಇಬ್ಬರು ಆರೋಪಿಗಳ್ನು ಕಳುಹಿಸಿದ್ದಾರೆ.
ರಾಮಯ್ಯನಪಾಳ್ಯ ಫಾರ್ಮ್ ಹೌಸ್ ನಲ್ಲಿ ನಟ ಪ್ರಥಮ್ ಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧ ಆರೋಪಿಗಳಾದ ಬೇಕರಿ ರಘು ಹಾಗೂ ಯಶಸ್ವಿನಿ ಗೌಡ ಜಾಮೀನು ರದ್ದುಗೊಳಿಸಲಾಗಿದೆ. ದೊಡ್ಡಬಳ್ಳಾಪುರ ಜೆಎಂಎಫ್ ಸಿ ನ್ಯಾಯಾಲಯವು ಜಾಮೀನು ರದ್ದುಗೊಳಿಸಿದೆ.ಜಾಮೀನು ರದ್ದುಪಡಿಸಿ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.
ಅಂದಹಾಗೇ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನನ್ನು ಬೇಕರಿ ರಘು, ಯಶಸ್ವಿನಿಗೆ ನೀಡಲಾಗಿತ್ತು. ಜಾಮೀನು ಪಡೆದ ಬಳಿಕವೂ ನಟ ಪ್ರಥಮ್ ಗೆ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿತ್ತು. ಕಳೆದ ಶನಿವಾರ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ನಟ ಪ್ರಥಮ್ ದೂರು ನೀಡಿದ್ದರು. ಪೊಲೀಸರು ಈ ದೂರಿನ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಬೇಕರಿ ರಘು, ಯಶಸ್ವಿನಿಗೌಡ ಜಾಮೀನು ರದ್ದುಗೊಳಿಸಿದೆ. ಬೇಕರಿ ರಘು, ಯಶಸ್ವಿನಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ನೆರವಿಗೆ ‘ಅಕ್ಕ ಪಡೆ’ ಸಿದ್ಧ: ನ.19ರಂದು ಚಾಲನೆ | Akka Pade
BREAKING: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ದಿನೇಶ್ ನೇಮಕ