ತುಮಕೂರು: ಕುಂಕುಮ ಇಡುವ ವೇಳೆಯಲ್ಲಿ ಅನುಚಿತವಾಗಿ ವರ್ತನೆ ತೋರಿದಂತ ಆರೋಪದಡಿ ಅರ್ಚಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದಂತ ಘಟನೆ ತುಮಕೂರಿನ ದೇವರಾಯನ ದುರ್ಗದಲ್ಲಿ ನಡೆದಿದೆ.
ತುಮಕೂರು ಹೊರವಲಯದ ದೇವರಾಯನದುರ್ಗದಲ್ಲಿ ಕುಂಕುಮ ಇಡುವಂತ ವೇಳೆಯಲ್ಲಿ ಅನುಚಿತವಾಗಿ ವರ್ತನೆ ಮಾಡಿದಂತ ಆರೋಪ ಕೇಳಿ ಬಂದಿದೆ. ಹೀಗಾಗಿ ಕುಟುಂಬಸ್ಥರು ದೇವಸ್ಥಾನದ ಆವರಣದಲ್ಲೇ ಅರ್ಚಕ ನಾಗಭೂಷಣ ಆಚಾರ್ಯಗೆ ನಾಲ್ವರಿಂದ ಹಲ್ಲೆ ಮಾಡಲಾಗಿದೆ.
ದೇವಸ್ಥಾನಕ್ಕೆ ಬಂದಿದ್ದಂತ ಮಹಿಳೆಯರು, ಯುವಕರಿಂದ ಅರ್ಚಕ ನಾಗಭೂಷಣ ಆಚಾರ್ಯ ಅವರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಅರ್ಚಕ ಕೈ ಮುಗಿದ್ರು, ಬೇಡಿದ್ರು ಕೋಲು, ಕೈಯಿಂದ ಥಳಿಸಲಾಗಿದೆ.
ಮೂರು ನಾಲ್ಕು ದಿಗಳ ಹಿಂದೆ ನಡೆದಿರುವಂತ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರ್ಚಕ ನಾಗಭೂಷಣ್ ಆಚಾರ್ಯ ಅವರನ್ನು ಥಳಿಸುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
SIT ತನಿಖೆಯಿಂದ ಧರ್ಮಸ್ಥಳದ ಅಪಪ್ರಚಾರ ಹಿಂದಿನ ಮುಖವಾಡ ಕಳಚಿ, ಸತ್ಯ ಬಯಲಿಗೆ: ಸಚಿವ ರಾಮಲಿಂಗಾರೆಡ್ಡಿ
BIG NEWS : ಸಂದರ್ಭ ಬಂದಾಗ ಡಿಸಿಎಂ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಸಚಿವ ಚೆಲುವರಾಯಸ್ವಾಮಿ ಹೇಳಿಕೆ