ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಪಾರದರ್ಶಕ, ಅಕ್ರಮ ರಹಿತವಾಗಿ ನಡೆಸೋದಕ್ಕೆ ಚುನಾವಣಾ ಆಯೋಗ ನಿರ್ಧರಿಸಿದೆ. ಅಕ್ರಮ ತಗೆಡೆ ವಿವಿಧ ಕ್ರಮ ಕೈಗೊಂಡಿದ್ದರೇ, ಮತದಾರರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿ ಮಾಹಿತಿ ಒಂದೇ ಕ್ಲಿಕ್ ನಲ್ಲಿ ಲಭ್ಯವಾಗುವಂತೆಯೂ ಮಾಡಿದೆ. ಅದು ಹೇಗೆ ಅಂತ ಮುಂದೆ ಓದಿ.
ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳ ಮಾಹಿತಿ ಮತದಾರರಿಗೆ ಕುಳಿತಲ್ಲೇ ಸಿಗುವಂತೆ ಮಾಡಿದೆ. ಆಯ್ಕೆಗಳು ಹಲವಾರಿದ್ದರೂ, ನೀವು ಆಯ್ಕೆ ಮಾಡೋಕೆ ಆಗೋದು ಒಂದೇ ಅಭ್ಯರ್ಥಿ ಮಾತ್ರ. ಅವರು ಯಾರಾಗಿರಬೇಕು ಎನ್ನುವ ಮಾಹಿತಿಯನ್ನು ನೀವು ಅವರ ಬಗ್ಗೆ ತಿಳಿದುಕೊಂಡು ಮಾಡೋದು ಒಳಿತು ಅಂತ ಹೇಳಿದೆ.
ಈ ಹಿನ್ನಲೆಯಲ್ಲಿ ಮತದಾರರ ಎಲ್ಲರೂ KYC-ECI ಬಳಸಿ, ಅಭ್ಯರ್ಥಿಗಳ ಅಫೀಡೆವಿಟ್ ನಲ್ಲಿ ತುಂಬಿರುವಂತ ಮಾಹಿತಿಯನ್ನು ತಿಳಿದುಕೊಳ್ಳಿ. ಈ ಮೂಲಕ ಲೋಕಸಭಾ ಕಣದಲ್ಲಿರುವಂತ ಅಭ್ಯರ್ಥಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಕೊಳ್ಳೋದು ಮರೆಯಬೇಡಿ ಅಂತ ತಿಳಿಸಿದೆ.
ಸೋ ನೀವು ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ಕುರಿತು ಸಕಲ ಮಾಹಿತಿಯನ್ನು ಈಗ ಒಂದೇ ಕ್ಲಿಕ್ಕಿನಲ್ಲಿ ಪಡೆಯೋದಕ್ಕಾಗಿ, ಈ ಕೂಡಲೇ KYC ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಅಂತ ಹೇಳಿದೆ.
ಹೀಗಿದೆ KYC-ECI ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡೋ ಲಿಂಕ್
Android: https://play.google.com/store/apps/details?id=com.eci.ksa&hl=en_IN&gl=US&pli=1
iOS: https://apps.apple.com/in/app/kyc-eci/id1604172836
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್
BREAKING: ನಾಳೆ ಬೆಳಗ್ಗೆ ಬಿಜೆಪಿಯೊಂದಿಗೆ ‘KRPP ಪಕ್ಷ’ ವಿಲೀನ: ಜನಾರ್ಧನ ರೆಡ್ಡಿ ‘BJP ಪಕ್ಷ’ ಸೇರ್ಪಡೆ