ಬೆಂಗಳೂರು: ರೈಲ್ವೆ ಪ್ರಯಾಣಿಕರ ಗಮನಕ್ಕೆ ಮಹತ್ವದ ಮಾಹಿತಿ ಎನ್ನುವಂತೆ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು 20 ನಿಮಿಷ ಲೇಟ್ ಆಗಿ ತಲುಪಲಿದೆ.
I. ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕ ನಿಯಂತ್ರಣ
ಬಾಗೇಶಪುರ ಮತ್ತು ಕೋರವಂಗಲ ಸೆಕ್ಷನ್ ನಡುವೆ ನಡೆಯುತ್ತಿರುವ ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 19, 21, 23, 26, 28, 30, ನವೆಂಬರ್ 2, 4, 6, 9, 11, 13, 16, 18, 20, 23, 25, 27, 30, ಡಿಸೆಂಬರ್ 2, 4, 7, 9, 11, 14, 16 ಮತ್ತು 18, 2024 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
II. ಅಜ್ಮೀರ್ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕ ನಿಯಂತ್ರಣ
ಪುಣೆ-ಮಿರಜ್ ಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆಯಲ್ಲಿ, ಅಕ್ಟೋಬರ್ 22, 2024 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು-ಅಜ್ಮೀರ್ ಬೈ-ವೀಕ್ಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ.
‘ಆಸಿರ್ವಾದ್ ಮೈಕ್ರೋ ಫೈನಾನ್ಸ್, ಡಿಎಂಐ ಫೈನಾನ್ಸ್’ಗೆ ಸಾಲ ಮಂಜೂರಾತಿ, ವಿತರಣೆಗೆ ‘RBI’ ನಿರ್ಬಂಧ
ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೊಸದಾಗಿ 5,800 ಬಸ್ ಸೇರ್ಪಡೆ | KSRTC Bus
BREAKING : ಹಾವೇರಿಯಲ್ಲಿ ಚರಂಡಿಗೆ ಬಿದ್ದು ಬಾಲಕ ಸಾವು ಕೇಸ್ : ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಡಿಸಿ ಆದೇಶ