ಬೆಂಗಳೂರು: ಬಿಜೆಪಿ ಸರ್ಕಾರದ ( BJP Government ) ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸುವುದು ನಿಶ್ಚಿತ. ಇನ್ಮುಂದೆ ದಿನಕ್ಕೊಂದು ಬಿಜೆಪಿ ಹಗರಣಗಳ ಕಥಾ ಸರಣಿ ಬರಲಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷವು ( Karnataka Congress Party ) ಎಕ್ಸ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸುವುದು ನಿಶ್ಚಿತ. ಹಗರಣದ ಆರೋಪಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ತನಿಖೆಗೆ ವಹಿಸಲು ಸಚಿವರ ಸಮಿತಿ ರಚನೆಯಾಗಿದೆ ಎಂದು ಹೇಳಿದೆ.
ಕೊಳ್ಳೆ ಹೊಡೆಯಲಾಗಿರುವ ಜನರ ಹಣಕ್ಕೆ ನ್ಯಾಯ ಒದಗಿಸುವುದಕ್ಕೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ದಿನಕ್ಕೊಂದು ಚಂದಮಾಮನ ಕತೆಯಂತೆ ಇನ್ಮುಂದೆ ದಿನಕ್ಕೊಂದು ಬಿಜೆಪಿ ಹಗರಣಗಳ ಕಥಾ ಸರಣಿ ಬರಲಿದೆ ಎಂಬುದಾಗಿ ತಿಳಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸುವುದು ನಿಶ್ಚಿತ.
ಹಗರಣದ ಆರೋಪಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ತನಿಖೆಗೆ ವಹಿಸಲು ಸಚಿವರ ಸಮಿತಿ ರಚನೆಯಾಗಿದೆ.ಕೊಳ್ಳೆ ಹೊಡೆಯಲಾಗಿರುವ ಜನರ ಹಣಕ್ಕೆ ನ್ಯಾಯ ಒದಗಿಸುವುದಕ್ಕೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.
ದಿನಕ್ಕೊಂದು ಚಂದಮಾಮನ ಕತೆಯಂತೆ…
— Karnataka Congress (@INCKarnataka) September 11, 2024
ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!