ಬೆಂಗಳೂರು: ಎಲ್ಲಾ ಪಕ್ಷದವರಿಗೂ ಹನಿಟ್ರ್ಯಾಪ್ ಆಗಿದೆ. ಕೆಲವರು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದಾರೆ. ನನ್ನ ವಿಷಯ ಸದನದಲ್ಲಿ ಪ್ರಸ್ತಾಪವಾಗಿ ಹೊರ ಬಂದಿದೆ ಎಂಬುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಹನಿಟ್ರ್ಯಾಪ್ ಯತ್ನ ಆರೋಪದ ಸಂಬಂಧ ತನಿಖೆ ನಡೆಸುವಂತೆ ಮನವಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಡ್ಜ್ ಗಳಿಗೆ ಹನಿಟ್ರ್ಯಾಪ್ ಆಗಿದೆ ಎಂದು ನಾನು ಹೇಳಿಲ್ಲ. ನಮ್ಮ ಪಾರ್ಟಿ, ಬೇರೆ ಪಾರ್ಟಿಯಯಲ್ಲೂ ಹನಿಟ್ರ್ಯಾಪ್ ಮಾಡಿದವರು ಇದ್ದಾರೆ. ಎಲ್ಲಾ ಪಕ್ಷದವರಿಗೂ ಹನಿಟ್ರ್ಯಾಪ್ ಆಗಿದೆ. ಕೆಲವರು ಸ್ಟೇ ತಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಈ ಚಾಳಿ ಮುಂದುವರೆಯಬಾರದು ಎಂದರು.
ಮಾಧ್ಯಮಗಳಲ್ಲಿ ತುಮಕೂರಿನ ಪ್ರಭಲ ಸಚಿವರು ಅಂತ ತೋರಿಸಿದ್ರು. ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರವನ್ನು ಸುನೀಲ್ ಪ್ರಸ್ತಾಪ ಮಾಡಿದರು. ಮಾರನೇ ದಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಹೆಸರು ಹೇಳಿದ್ರು. ಹೀಗಾಗಿ ಸದನದಲ್ಲೇ ಈ ವಿಚಾರ ಬಹಿರಂಗಪಡಿಸಬೇಕಾಯಿತು ಎಂದರು.
ಎಕೆ-47 ಹಿಡಿದು ಕಥುವಾದಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ