Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆಗೆ ಸಜ್ಜು: ಸಚಿವ ದಿನೇಶ್ ಗುಂಡೂರಾವ್

01/07/2025 7:51 PM

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

01/07/2025 7:44 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಹೋಂ ಸ್ಟೇ’ ಸೇರಿ ಎಲ್ಲಾ ‘ಅರಣ್ಯ ಒತ್ತುವರಿ’ ತೆರವುಗೊಳಿಸಿ: ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ
KARNATAKA

BREAKING: ‘ಹೋಂ ಸ್ಟೇ’ ಸೇರಿ ಎಲ್ಲಾ ‘ಅರಣ್ಯ ಒತ್ತುವರಿ’ ತೆರವುಗೊಳಿಸಿ: ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ

By kannadanewsnow0902/09/2024 6:56 PM

ಬೆಂಗಳೂರು: ರಾಜ್ಯಾಧ್ಯಂತ ಮತ್ತೆ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಇದಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಹೋಂ ಸ್ಟೇ ಸೇರಿದಂತೆ ಎಲ್ಲಾ ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸುವಂತೆ ಖಡಕ್ ಆದೇಶ ಮಾಡಿದ್ದಾರೆ.

ಈ ಕುರಿತಂತೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವಂತ ಸಚಿವ ಈಶ್ವರ್ ಖಂಡ್ರೆ, ಅದರಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ಕಾರ್ಯಪಡೆ ರಚಿಸಲಾಗಿದ್ದು, ಮೊದಲಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್ ಗಳು, ಹೋಂಸ್ಟೇಗಳನ್ನು ಹಾಗೂ ಕರ್ನಾಟಕ ಅರಣ್ಯ ಕಾಯಿದೆ 19630 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ, ವಿಚಾರಣೆ ಬಾಕಿ ಇಲ್ಲದ ದೊಡ್ಡ ಒತ್ತುವರಿಗಳನ್ನು ತೆರವು ಮಾಡಲು ಸೂಚಿಸಲಾಗಿರುತ್ತದೆ. ಈ ಕಾರ್ಯಪಡೆ ಕಳೆದ ಒಂದು ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರ ಸಹಿತ ಈ ಕಚೇರಿಗೆ ಕೂಡಲೇ ಸಲ್ಲಿಸಲು ಸೂಚಿಸಿದೆ ಎಂದಿದ್ದಾರೆ.

ಮುಂದುವರಿದು, 2015ರಲ್ಲಿ ಕರ್ನಾಟಕ ಸರ್ಕಾರದ ನಡವಳಿಯಂತೆ “ದಿನಾಂಕ 27.04.1978ರ ಪೂರ್ವದ ಅರಣ್ಯ ಒತ್ತುವರಿಗಳನ್ನು ಸಕ್ರಮಗೊಳಿಸಲು 1996ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗಳಲ್ಲಿ ಕೈಬಿಟ್ಟುಹೋಗಿರುವ ಅರ್ಹ ಪ್ರಕರಣಗಳನ್ನು ಅರಣ್ಯ (ಸಂರಕ್ಷಣಾ ಕಾಯಿದೆ 1980ರಡಿಯಲ್ಲಿ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಅರಣ್ಯ ಒತ್ತುವರಿ ಮತ್ತು ಒತ್ತುವರಿದಾರನ ಪಟ್ಟಾ ಜಮೀನು ಸೇರಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶಕ್ಕೆ ಒಳಪಟ್ಟು ಹಾಗೂ ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕು ಮಾನ್ಯ ಮಾಡುವ ಅಧಿನಿಯಮ)2006ರ ಮತ್ತು 2008ರ ನಿಯಮಗಳ ಕಲಂ 5ರನ್ವಯ ಯಾರೇ ಅರಣ್ಯವಾಸಿ ಅನುಸೂಚಿತ ಬುಡಕಟ್ಟಿನ ವ್ಯಕ್ತಿ ಅಥವಾ ಇತರೆ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಹಾಕಿದ್ದಲ್ಲಿ ಅದು ಸುಪ್ರೀಂಕೋರ್ಟ್ ಆದೇಶದನ್ವಯ ಪುನರ್ ಪರಿಶೀಲನೆಗೆ ಬಾಕಿ ಇಲ್ಲದ ಪ್ರಕರಣಗಳನ್ನು ಖಾತ್ರಿ ಪಡಿಸಿಕೊಂಡು ಅರಣ್ಯ ಒತ್ತುವರಿಯನ್ನು ಈ ಕೆಳಕಂಡ ಆದ್ಯತೆಯಲ್ಲಿ ತೆರವು ಮಾಡುವುದು ಎಂದು ತಿಳಿಸಿದ್ದಾರೆ.

  • ಅರಣ್ಯ ಜಮೀನು ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್, ಹೋಂ ಸ್ಟೇ.
  • 30 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಅರಣ್ಯ ಭೂಮಿ ಒತ್ತುವರಿ.
  • 10ರಿಂದ 30 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿ
  • 03 ರಿಂದ 10 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿ

64 ಎ ಪ್ರಕ್ರಿಯೆ ಬಾಕಿ ಇದ್ದಲ್ಲಿ ಅಥವಾ ನ್ಯಾಯಾಲಯಗಳಲ್ಲಿ ಪ್ರಕರಣ ಬಾಕಿ ಇದ್ದಲ್ಲಿ ಇವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಲು ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ಭಾಗಶಃ ರದ್ದು, ಮಾರ್ಗ ಬದಲಾವಣೆ | South Western Railway

ಸರ್ವರ ಶ್ರಮದಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ: ದಿನೇಶ್ ಗೂಳಿಗೌಡ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆಗೆ ಸಜ್ಜು: ಸಚಿವ ದಿನೇಶ್ ಗುಂಡೂರಾವ್

01/07/2025 7:51 PM2 Mins Read

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

01/07/2025 7:44 PM3 Mins Read

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM2 Mins Read
Recent News

ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆಗೆ ಸಜ್ಜು: ಸಚಿವ ದಿನೇಶ್ ಗುಂಡೂರಾವ್

01/07/2025 7:51 PM

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

01/07/2025 7:44 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM

BREAKING : ಮಾರುಕಟ್ಟೆ ದುರುಪಯೋಗ ಆರೋಪ ; ‘ಏಷ್ಯನ್ ಪೇಂಟ್ಸ್’ ವಿರುದ್ಧದ ತನಿಖೆಗೆ ‘CCI’ ಆದೇಶ

01/07/2025 7:34 PM
State News
KARNATAKA

ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆಗೆ ಸಜ್ಜು: ಸಚಿವ ದಿನೇಶ್ ಗುಂಡೂರಾವ್

By kannadanewsnow0901/07/2025 7:51 PM KARNATAKA 2 Mins Read

ಬೆಂಗಳೂರು: ದೃಷ್ಟಿದೋಷ ನಿವಾರಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ‘ಆಶಾಕಿರಣ’ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ರಾಜ್ಯದ ಜಿಲ್ಲಾಸ್ಪತ್ರೆಗಳು, ತಾಲೂಕು…

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

01/07/2025 7:44 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

01/07/2025 7:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.