Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು: ನವದೆಹಲಿಯಲ್ಲಿ ಬೀಡುಬಿಟ್ಟ ಶಾಸಕ ಗೋಪಾಲಕೃಷ್ಣ ಬೇಳೂರು

13/04/2026 10:49 PM

ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ: ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ

13/04/2026 9:59 PM

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

13/04/2026 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಬೀದಿ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಏನು ಮಾಡಬೇಕು? ಪ್ರಾಣ ಉಳಿಸಬಲ್ಲ 5 ಅತ್ಯಗತ್ಯ ಸಲಹೆಗಳು ಇಲ್ಲಿವೆ !
KARNATAKA

ALERT : ಬೀದಿ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಏನು ಮಾಡಬೇಕು? ಪ್ರಾಣ ಉಳಿಸಬಲ್ಲ 5 ಅತ್ಯಗತ್ಯ ಸಲಹೆಗಳು ಇಲ್ಲಿವೆ !

By kannadanewsnow5720/03/2026 8:30 AM

ಬೀದಿಗಳಲ್ಲಿ ಓಡಾಡುವಾಗ ನಾಯಿಗಳ ಹಿಂಡು ಏಕಾಏಕಿ ದಾಳಿ ಮಾಡುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಪುಣೆಯಲ್ಲಿ ಮಹಿಳೆಯೊಬ್ಬರು ನಾಯಿಗಳ ದಾಳಿಯಿಂದಾಗಿ ಪ್ರಾಣ ಕಳೆದುಕೊಂಡ ಘಟನೆ ನಮ್ಮ ಕಣ್ಣಮುಂದಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಗಾಬರಿಯಾಗುವ ಬದಲು, ಬುದ್ಧಿವಂತಿಕೆಯಿಂದ ವರ್ತಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದು.

ಪಶು ತಜ್ಞರ ಪ್ರಕಾರ, ನಾಯಿಗಳು ದಾಳಿ ಮಾಡಲು ತನ್ನದೇ ಆದ ಕಾರಣಗಳನ್ನು ಹೊಂದಿರುತ್ತವೆ. ಹಾಗಾದರೆ, ನಾಯಿಗಳ ಹಿಂಡಿನಿಂದ ಪಾರಾಗುವುದು ಹೇಗೆ? ಈ ಕೆಳಗಿನ 5 ಅಂಶಗಳನ್ನು ನೆನಪಿಡಿ:

1. ಓಡಬೇಡಿ, ಸಂಪೂರ್ಣ ಶಾಂತರಾಗಿರಿ
ನಾಯಿಗಳು ಬೆನ್ನಟ್ಟಿದಾಗ ನಾವು ಭಯದಿಂದ ಓಡಲು ಶುರುಮಾಡುತ್ತೇವೆ. ಆದರೆ ಇದು ಅತ್ಯಂತ ಅಪಾಯಕಾರಿ. ನೀವು ಓಡಲು ಶುರುಮಾಡಿದರೆ, ನಾಯಿಗಳಿಗೆ ನಿಮ್ಮನ್ನು ಬೇಟೆಯಾಡುವ ಸಹಜ ಪ್ರವೃತ್ತಿ ಜಾಗೃತವಾಗುತ್ತದೆ. ಎಷ್ಟೇ ಭಯವಾದರೂ ಧೈರ್ಯ ತಂದುಕೊಂಡು ನಿಂತ ಜಾಗದಲ್ಲೇ ನಿಲ್ಲಿ ಅಥವಾ ಅತ್ಯಂತ ನಿಧಾನವಾಗಿ ಹೆಜ್ಜೆ ಹಾಕಿ. ನೀವು ಅವುಗಳಿಗೆ ಶತ್ರುವಲ್ಲ ಎಂಬ ಭಾವನೆ ಮೂಡಲಿ.

2. ಕಣ್ಣಿಗೆ ಕಣ್ಣಿಟ್ಟು ನೋಡಬೇಡಿ (Eye Contact)
ನಾಯಿಗಳ ಕಣ್ಣನ್ನು ನೇರವಾಗಿ ನೋಡುವುದು ಅವುಗಳಿಗೆ ನೀವು ಸವಾಲು ಹಾಕುತ್ತಿದ್ದೀರಿ ಅಥವಾ ದಾಳಿ ಮಾಡುತ್ತೀರಿ ಎಂಬ ಸಂಕೇತ ನೀಡುತ್ತದೆ. ಆದ್ದರಿಂದ ನಾಯಿಗಳ ಕಣ್ಣಿಗೆ ಕಣ್ಣಿಟ್ಟು ನೋಡಬೇಡಿ. ನಿಮ್ಮ ಕೈಗಳನ್ನು ಆಡಿಸಬೇಡಿ ಅಥವಾ ಕೂಗಾಡಬೇಡಿ. ಮುಖಭಾವವನ್ನು ಸಹಜವಾಗಿಟ್ಟುಕೊಂಡು ಅವುಗಳನ್ನು ನಿರ್ಲಕ್ಷಿಸುವಂತೆ ವರ್ತಿಸಿ.

3. ಸುರಕ್ಷಿತ ಅಂತರ ಕಾಯ್ದುಕೊಳ್ಳಿ
ನಾಯಿಗಳ ಹಿಂಡು ನಿಮ್ಮನ್ನು ಸುತ್ತುವರಿದಾಗ ಅವುಗಳ ತೀರಾ ಹತ್ತಿರ ಹೋಗಬೇಡಿ. ಗುಂಪಿನಲ್ಲಿರುವ ನಾಯಿಗಳು ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ. ಅವುಗಳಿಗೂ ನಿಮಗೂ ನಡುವೆ ಬ್ಯಾಗ್, ಜಾಕೆಟ್ ಅಥವಾ ಕೊಡೆ ಅಡ್ಡ ಹಿಡಿಯಿರಿ. ಹಿಮ್ಮುಖವಾಗಿ ಚಲಿಸುವಾಗಲೂ ಬೆನ್ನು ತೋರಿಸದೆ ನಿಧಾನವಾಗಿ ಹಿಂದೆ ಸರಿಯಿರಿ.

4. ನಾಯಿಗಳ ವರ್ತನೆಯನ್ನು ಗಮನಿಸಿ
ನಾಯಿಗಳು ತಮ್ಮ ದೇಹದ ಮೂಲಕ ಕೆಲವು ಸಂಕೇತಗಳನ್ನು ನೀಡುತ್ತವೆ. ನಾಯಿ ಹಲ್ಲಿನಿಂದ ತುಟಿಗಳನ್ನು ನೆಕ್ಕುತ್ತಿದ್ದರೆ ಅಥವಾ ನಿಮ್ಮ ಕಡೆಯಿಂದ ದೃಷ್ಟಿ ಸರಿಸುತ್ತಿದ್ದರೆ ಅದರ ಕೋಪ ಕಡಿಮೆಯಾಗುತ್ತಿದೆ ಎಂದರ್ಥ. ಅಂತಹ ಸಂದರ್ಭದಲ್ಲಿ ಅದು ನಿಮ್ಮನ್ನು ವಾಸನೆ ನೋಡಲು ಬಂದರೆ ತಡೆಯಬೇಡಿ, ಅದು ನಿಮ್ಮನ್ನು ಪರಿಶೀಲಿಸಿ ಸುಮ್ಮನಾಗಬಹುದು.

5. ತುರ್ತು ಸಂದರ್ಭದಲ್ಲಿ ವಸ್ತುವನ್ನು ಅಡ್ಡ ಇಡಿ
ನಾಯಿ ಕಚ್ಚಲು ಮುಂದಾದರೆ ನಿಮ್ಮ ಬಳಿ ಇರುವ ಯಾವುದಾದರೂ ವಸ್ತುವನ್ನು (ಬ್ಯಾಗ್, ಹೆಲ್ಮೆಟ್ ಅಥವಾ ಕಲ್ಲು) ಅದರ ಬಾಯಿಗೆ ಸಿಗುವಂತೆ ಮಾಡಿ. ಇದರಿಂದ ಅದು ನಿಮ್ಮ ದೇಹವನ್ನು ಕಚ್ಚುವ ಬದಲು ಆ ವಸ್ತುವನ್ನು ಕಚ್ಚುತ್ತದೆ. ತಕ್ಷಣ ಸ್ಥಳೀಯರ ಸಹಾಯಕ್ಕಾಗಿ ಕೂಗಿರಿ.

ನಾಯಿಗಳು ಏಕೆ ದಾಳಿ ಮಾಡುತ್ತವೆ?
ಪ್ರದೇಶದ ರಕ್ಷಣೆ: ನಾಯಿಗಳು ತಮ್ಮ ಏರಿಯಾವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತವೆ. ಬೇರೆ ಏರಿಯಾದ ನಾಯಿ ಅಥವಾ ಅಪರಿಚಿತ ವ್ಯಕ್ತಿ ಬಂದಾಗ ಅವುಗಳಿಗೆ ಬೆದರಿಕೆ ಎನಿಸಬಹುದು.

ಹಸಿವು: ಹಸಿವಿನಿಂದ ಇರುವ ನಾಯಿಗಳು ಹೆಚ್ಚು ಕೋಪದಲ್ಲಿರುತ್ತವೆ.

ವಾಹನಗಳ ಮೇಲೆ ದಾಳಿ: ಒಂದು ಪ್ರದೇಶದ ನಾಯಿಗಳು ಬೇರೊಂದು ಪ್ರದೇಶದ ವಾಹನದ ಟೈರ್ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿ ಗಂಧ ಬಿಟ್ಟಿರುತ್ತವೆ. ಆ ವಾಹನ ಮತ್ತೊಂದು ಏರಿಯಾಕ್ಕೆ ಹೋದಾಗ ಅಲ್ಲಿನ ನಾಯಿಗಳಿಗೆ ಅದು ‘ವೈರಿ’ ನಾಯಿಯ ವಾಸನೆ ಎಂದು ಭಾಸವಾಗಿ ದಾಳಿ ಮಾಡುತ್ತವೆ.

ನಾಯಿ ಕಚ್ಚಿದರೆ ಏನು ಮಾಡಬೇಕು?
ಒಂದು ವೇಳೆ ನಾಯಿ ಕಚ್ಚಿದರೆ, ತಕ್ಷಣವೇ ಆ ಗಾಯವನ್ನು ಹರಿಯುವ ನೀರಿನಲ್ಲಿ ಕನಿಷ್ಠ 10-15 ನಿಮಿಷಗಳ ಕಾಲ ಸೋಪು ಬಳಸಿ ತೊಳೆಯಿರಿ. ಯಾವುದೇ ವಿಳಂಬ ಮಾಡದೆ ವೈದ್ಯರ ಬಳಿ ಹೋಗಿ ರೇಬಿಸ್ ಲಸಿಕೆ ಪಡೆಯಿರಿ.

ALERT: What to do if you are attacked by stray dogs? Here are 5 essential tips that could save your life!
Share. Facebook Twitter LinkedIn WhatsApp Email

Related Posts

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು: ನವದೆಹಲಿಯಲ್ಲಿ ಬೀಡುಬಿಟ್ಟ ಶಾಸಕ ಗೋಪಾಲಕೃಷ್ಣ ಬೇಳೂರು

13/04/2026 10:49 PM2 Mins Read

ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ: ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ

13/04/2026 9:59 PM1 Min Read

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

13/04/2026 9:36 PM2 Mins Read
Recent News

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು: ನವದೆಹಲಿಯಲ್ಲಿ ಬೀಡುಬಿಟ್ಟ ಶಾಸಕ ಗೋಪಾಲಕೃಷ್ಣ ಬೇಳೂರು

13/04/2026 10:49 PM

ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ: ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ

13/04/2026 9:59 PM

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

13/04/2026 9:36 PM

ಬೆಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಸ್ಲೀಪರ್’ ರೈಲು ಸಂಚಾರಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್

13/04/2026 9:32 PM
State News
KARNATAKA

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು: ನವದೆಹಲಿಯಲ್ಲಿ ಬೀಡುಬಿಟ್ಟ ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0913/04/2026 10:49 PM KARNATAKA 2 Mins Read

ನವದೆಹಲಿ/ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ಚಟುವಟಿಕೆಗಳು ತೀವ್ರಗೊಂಡ ಬೆನ್ನಲ್ಲೇ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು…

ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ: ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ

13/04/2026 9:59 PM

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

13/04/2026 9:36 PM

ಬೆಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಸ್ಲೀಪರ್’ ರೈಲು ಸಂಚಾರಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್

13/04/2026 9:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.