ಮೈಸೂರು : ನಾಳೆಯಿಂದ ಹೊಸ ವರ್ಷ ಶುರುವಾಗಲಿದ್ದು, 2025 ನೇ ಹೊಸ ವರ್ಷ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ನಡೆಸಿದ್ದು, ಈ ನಡುವೆ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ದಯವಿಟ್ಟು ಶುಭಾಷಯಗಳ ಪಠ್ಯ ಸಂದೇಶವನ್ನು ಮಾತ್ರ ಹಂಚಿಕೊಳ್ಳಿ. ತೆರೆಯಲು ಮತ್ತು ಪರಿಶೀಲಿಸಲು ಕೇಳುವ ಚಿತ್ರಗಳು, ಲಿಂಕ್ ಗಳನ್ನು ಹಂಚಿಕೊಳ್ಳಬೇಡಿ ಮತ್ತು ತೆರೆಯಬೇಡಿ, ಇತ್ತೀಚಿನ ಸೈಬರ್ ಕ್ರೈಂ ಗಳು ಆತಂಕಕಾರಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರು ನಿಮ್ಮ ಮೊಬೈಲ್ ಗಳಿಗೆ ಬರುವ ಯಾವುದೇ ಅಂಕ್ ಅಥವಾ ಚಿತ್ರವನ್ನು ಲಿಂಕ್ ಗಳೊಂದಿಗೆ ತೆರೆಯುವಾಗ ಜಾಗರೂಕರಾಗಿರಿ. ಯಾರದರೂ ನಿಮಗೆ ಕಳುಹಿಸಿದ ಶುಭಾಷಯಗಳನ್ನು ಅಥವಾ ಅಂಕ್ ಗಳನ್ನು ಇತರೆ ಗುಂಪುಗಳಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.