ಮ೦ಗನ ಕಾಯಿಲೆ (ಕೆಎಫ್ಡಿ) ಎಂಬುದು ಉಣ್ಣೆಗಳ ಕಡಿತದಿಂದ ಮನುಷ್ಯರಿಗೆ ಹರಡುವ ವೈರಲ್ ಜ್ವರವಾಗಿದೆ. ಹೀಗಾಗಿ ಜನರು ಮಂಗನ ಕಾಯಿಲೆ ಬಗ್ಗೆ ಭಯ ಬೇಡ, ಎಚ್ಚರ ವಹಿಸಿ, ಜಾಗರೂಕರಾಗಿರಿ.
ಲಕ್ಷಣಗಳೇನು?
ವಾಕರಿಕೆ ಅಥವಾ ವಾಂತಿ
ಸ್ನಾಯು ಸೆಳೆತ
ಅತಿಸಾರ ಬೇಧಿ
ಕೆಲವೊಮ್ಮೆ ನರಸಂಬಂಧಿ ಲಕ್ಷಣಗಳು ಕಾಣಿಸಿಕೊಳ್ಳಬಹುದು
ತೀವ್ರ ಜ್ವರ
ಮಂಗನ ಕಾಯಿಲೆಯ ನಿಯಂತ್ರಣ ಮತ್ತು ರಕ್ಷಣೆ ಹೇಗೆ?
ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಉದ್ದನೆಯ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಿ.
ಅರಣ್ಯ ಅಥವಾ ಉಣ್ಣೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು DEET ಅಥವಾ DMP ತೈಲದಂತಹ ಕೀಟ ನಿವಾರಕಗಳನ್ನು ಹಚ್ಚಿಕೊಳ್ಳಿ
ನಿಮ್ಮ ಸಾಕುಪ್ರಾಣಿಗಳ ಮೇಲಿರುವ ಉಣ್ಣೆಗಳನ್ನು ನಿಯಮಿತವಾಗಿ ತೆಗೆದುಹಾಕಿ.
ಪ್ರಾಣಿಗಳ ಕೊಟ್ಟಿಗೆ ಮತ್ತು ಆಶ್ರಯ ತಾಣಗಳಲ್ಲಿ ನಿಯಮಿತವಾಗಿ ಕೀಟನಾಶಕಗಳನ್ನು ಸಿ೦ಪಡಿಸಿ.
ಕಾಡಿಗೆ ಹೋದ ಪ್ರಾಣಿಗಳಿಂದ ಉಣ್ಣೆ ಬಾರದಂತೆ ತಡೆಯಲು ನಿಯಮಿತವಾಗಿ ಪ್ರಾಣಿಗಳ ಮೇಲೆ ಉಣ್ಣೆ ನಿವಾರಕಗಳನ್ನು ಬಳಸಿ.
ಮನೆಯ ಸುತ್ತಮುತ್ತ ಒಣ ಎಲೆಗಳನ್ನು ರಾಶಿ ಹಾಕಬೇಡಿ. ಅವುಗಳಲ್ಲಿ ಪ್ರಾಣಾಪಾಯ ಉಂಟು ಮಾಡುವ ಉಣ್ಣೆಗಳಿರಬಹುದು.
ಮ೦ಗಗಳು ಸತ್ತಿರುವ ಸ್ಥಳಗಳಿಗೆ / ಆ ಬಗ್ಗೆ ವರದಿಯಾಗಿರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ.
ಮಂಗನ ಕಾಯಿಲೆ ಬಗ್ಗೆ ಭಯ ಬೇಡ, ಎಚ್ಚರ ವಹಿಸಿ, ಜಾಗರೂಕರಾಗಿರಿ.#KFD #HealthAwareness pic.twitter.com/lCpjckZF4g
— DIPR Karnataka (@KarnatakaVarthe) January 7, 2026
ಮಂಗನ ಕಾಯಿಲೆ ಬಗ್ಗೆ ಭಯ ಬೇಡ, ಎಚ್ಚರ ವಹಿಸಿ, ಜಾಗರೂಕರಾಗಿರಿ.#KFD #HealthAwareness pic.twitter.com/V1SdqnfXGI
— DIPR Karnataka (@KarnatakaVarthe) January 7, 2026
ಮಂಗನ ಕಾಯಿಲೆ ಬಗ್ಗೆ ಭಯ ಬೇಡ, ಎಚ್ಚರ ವಹಿಸಿ, ಜಾಗರೂಕರಾಗಿರಿ.#KFD #HealthAwareness pic.twitter.com/AW6sSbz75I
— DIPR Karnataka (@KarnatakaVarthe) January 7, 2026








