ಮಕ್ಕಳಿಗೆ ಬಿಸ್ಕತ್ ನೀಡುವ ಪೋಷಕರೇ ಎಚ್ಚರ. ಒಬ್ಬ ಬಾಲಕ ಬಿಸ್ಕತ್ ತಿನ್ನುತ್ತಿದ್ದಾಗ ಕಬ್ಬಿಣದ ತಂತಿಗಳು ಪತ್ತೆಯಾಗಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಗೋಡುಪಲ್ಲಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಒಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ತಂದ ಬೋರ್ಬನ್ ಬಿಸ್ಕೆಟ್ ಒಂದರಲ್ಲಿ ತೆಳುವಾದ ಕಬ್ಬಿಣದ ತಂತಿಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ವೈರಲ್ ಆಗಿದೆ. ಇವುಗಳನ್ನು ಯಾರೂ ತಿನ್ನಬಾರದು ಎಂದು ಎಚ್ಚರಿಸಿದರು.
Shocking incident in #Kamareddy district! 😲
A man discovers an iron wire inside a #BourbonBiscuit while his children were eating
He posted this video urging all parents to be cautious of such dangers#FoodSaftey #ESSAI #Pushpa2TheRule #RakulPreet #Vettaiyan #FahadhFaasil pic.twitter.com/1fEDPvlcNP
— Pakka Telugu Media (@pakkatelugunewz) October 10, 2024
ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಹನುಮಂತ ರೆಡ್ಡಿ ಎಂಬ ವ್ಯಕ್ತಿ ಗೋಡು ಪಲ್ಲಿ ಗ್ರಾಮದ ಸ್ಥಳೀಯ ಅಂಗಡಿಯಲ್ಲಿ ಕಬ್ಬಿಣದ ತಂತಿಗಳಿಂದ ಕಲುಷಿತವಾದ ಬಿಸ್ಕತ್ತುಗಳ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಉತ್ಪನ್ನಗಳನ್ನು ಸೇವಿಸುವಾಗ ಜಾಗರೂಕರಾಗಿರಿ ಎಂದು ಮಕ್ಕಳಿಗೆ ಎಚ್ಚರಿಕೆ ನೀಡಲಾಗಿದೆ.
ಈ ಕಲುಷಿತ ಬಿಸ್ಕೆಟ್‌ಗಳ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಅವರು, ಇದೇ ರೀತಿಯ ಕಲುಷಿತ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ಬಿಸ್ಕೆಟ್ ಪ್ಯಾಕೆಟ್ ನೋಡಿ ತಿನ್ನಬೇಡಿ ಎಂದು ತಾಕೀತು ಮಾಡಿದರು.