ರಸ್ತೆಯ ಮೇಲೆ ಚಾಲನಾ ಅನುಜ್ಞಾಪತ್ರ ಹಾಗೂ ನೋಂದಣಿ/ ಅರ್ಹತಾ ಪತ್ರ/ ರಹದಾರಿ/ ಹೊಗೆ ತಪಾಸಣೆ ಪತ್ರ/ ವಿಮೆ ಇಲ್ಲದೇ ಸಂಚರಿಸುತ್ತಿರುವುದನ್ನು ಸಾಗರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನಿಸಿದ್ದು, ವಾಹನ ಮಾಲೀಕರು/ಸವಾರರು ಈ ಎಲ್ಲಾ ದಾಖಲೆಗಳನ್ನು ಪಡೆದು/ ವಾಯಿದೆಯ 15 ದಿನಗಳ ಮುಂಚಿತವಾಗಿ ನವೀಕರಿಸುವಂತೆ ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರೇಶ್ ಡಿ.ಹೆಚ್. ತಿಳಿಸಿದ್ದಾರೆ.
ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವ್ಯಾಪ್ತಿಗೆ ಬರುವ ಎಲ್ಲಾ ಆಟೋರಿಕ್ಷಾ/ ಮೋಟಾರ್ ಕ್ಯಾಬ್/ಮ್ಯಾಕ್ಸಿ ಕ್ಯಾಬ್/ಹಾಗೂ ಇತರೆ ಸಾರಿಗೇತರ ವಾಹನಗಳಿಗೆ ನೋಂದಣಿ/ ಅರ್ಹತಾ ಪತ್ರ/ ರಹದಾರಿ/ ಹೊಗೆ ತಪಾಸಣೆ ಪತ್ರ/ ವಿಮೆ / ಚಾಲನಾ ಅನುಜ್ಞಾ ಪತ್ರಗಳನ್ನೊಳಗೊಂಡ ಸೂಕ್ತ ದಾಖಲೆಗಳನ್ನು ಮಾಡಿಸುವಂತೆ ಹಾಗೂ ನೋಂದಣಿ/ ಅರ್ಹತಾ ಪತ್ರಗಳ ಅವಧಿ ಮೀರಿದ ವಾಹನಗಳ ನಿಗಧಿತ ಶುಲ್ಕ ಹಾಗೂ ಅರ್ಜಿ ಸಲ್ಲಿಸಿ ವಾಹನ ತಪಾಸಿಸಲು ಕಚೇರಿಗೆ ಹಾಜರುಪಡಿಸುವಂತೆ ವಾಹನ ಮಾಲೀಕರಿಗೆ ತಿಳಿಸಲಾಗಿದೆ ತಪ್ಪಿದಲ್ಲಿ ಅಂತಹ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿರುತ್ತಾರೆ.