ಬೆಂಗಳೂರು : ಗಮನಿಸಿ ಆನ್ಲೈನ್ನಲ್ಲಿ ಮಾಡಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟೈಪ್ ಮಾಡುವ ಮೊದಲು ಯೋಚಿಸಿ — ಏಕೆಂದರೆ ನಿಮ್ಮ ಪೋಸ್ಟ್ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು.
ಸೆಪ್ಟೆಂಬರ್ 29ರಿಂದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 12 ಶುರುವಾಗಲಿದೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರೇ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಅಂತ ಹೆಸರು ಫೋಟೋ ವೈರಲ್ ಆಗಿವೆ. ಆದರೆ ಇದರ ಮಧ್ಯ ಕಿಡಿಗಿಡಿ ಒಬ್ಬ ಬಿಗ್ ಬಾಸ್ ಗೆ ನನ್ನನ್ನು ಕರೆಯಲಿಲ್ಲ ಅಂದರೆ ಬಾಂಬ್ ಇಡುತ್ತೇನೆ ಎಂದು ಹೇಳಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ಅಲ್ಲಿ ಯುವಕನಿಂದ ಬೆದರಿಕೆ ವಿಡಿಯೋ ವೈರಲ್ ಆಗಿದ್ದು ಬಿಗ್ ಬಾಸ್ ಗೆ ನನ್ನ ಕರೆದಿಲ್ಲ ಆದರೆ ನಾನು ಬಾಂಬ್ ಇಡುತ್ತೇನೆ ಮಮ್ಮಿ ಅಶೋಕ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಒಂದು ವಿಡಿಯೋ ಪೋಸ್ಟ್ ಮಾಡಿದ್ದು ವಿಡಿಯೋ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಸ್ವಯಂ ಪ್ರೇರಿತವಾಗಿ NCR ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಶೋಕ್ ಎಂಬ ಯುವಕನನ್ನು ಕರೆದು ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿದಾಗ ಎಂದು ವಿಚಾರಣೆ ವೇಳೆ ಮಾಡಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ.
https://twitter.com/BlrCityPolice/status/1971857157692780805?ref_src=twsrc%5Etfw%7Ctwcamp%5Etweetembed%7Ctwterm%5E1971857157692780805%7Ctwgr%5E20e311aa41fdfaae75f48874002377e95caaf039%7Ctwcon%5Es1_&ref_url=https%3A%2F%2Fkannadadunia.com%2Fif-you-post-such-a-thing-on-social-media-you-will-be-punished-with-imprisonment-police-warn%2F