ಮಂಡ್ಯ : ಮಂಡ್ಯದಲ್ಲಿ ಹಣ ಡಬಲ್ ಮಾಡುವುದಾಗಿ ಖಾಸಗಿ ಫೈನಾನ್ಸ್ ಕಂಪನಿಗಳ ಹೆಸರಿನಲ್ಲಿ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ.
ಮಂಡ್ಯದಲ್ಲಿ PACL, ಹಿಂದೂಸ್ತಾನ್ ಅಗ್ರಿಗೋಲ್ಡ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಸಾರ್ವಜನಿಕರಿಗೆ ವಂಚನೆ ಮಾಡಿದ್ದು, ಹಣ ಡಬಲ್ ಮಾಡುವುದಾಗಿ ಹೇಳಿ ಬರೋಬ್ಬರಿ 100 ಕೋಟಿ ರೂ.ಗೂ ಅಧಿಕ ಹಣವನ್ನು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ
ಮಂಡ್ಯದಲ್ಲಿ ಹಣ ಕಳೆದುಕೊಂಡವರು ಜಿಲ್ಲಾಡಳಿತಕ್ಕೆ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ 10 ಸಾವಿರದಿಂದ 1 ಲಕ್ಷ ರೂ.ವರೆಗೆ ಹಣ ಸಾರ್ವಜನಿಕರು ಹಣ ಕಟ್ಟಿದ್ದರು. ಆದರೆ ಹಣ ಕಟ್ಟಿಸಿಕೊಂಡ ಖಾಸಗಿ ಫೈನಾನ್ಸ್ ಕಂಪನಿಗಳು ಜನರಿಗೆ ವಂಚಿಸಿರುವ ಆರೊಪ ಕೇಳಿಬಂದಿದೆ.