ಚಿಕ್ಕಮಗಳೂರು: ಸೈಬರ್ ಅಪರಾಧಿಗಳು ಯಾವಾಗ ಮತ್ತು ಯಾವ ರೀತಿಯ ವಂಚನೆಗಳನ್ನು ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಸಂದೇಶಗಳು, ಕರೆಗಳು, ಬೆದರಿಕೆಗಳು, ಸಾಲಗಳು, ಡಿಜಿಟಲ್ ಬಂಧನಗಳು.. ಅವರು ಜನರನ್ನು ಹಲವು ವಿಧಗಳಲ್ಲಿ ಮೋಸ ಮಾಡುತ್ತಿದ್ದಾರೆ.
ಅನೇಕ ಜನರು ಈಗಾಗಲೇ ಸೈಬರ್ ಅಪರಾಧಿಗಳ ವಂಚನೆಗೆ ಬಲಿಯಾಗಿದ್ದಾರೆ. ಜನರು ಎಷ್ಟೇ ಜಾಗರೂಕರಾಗಿದ್ದರೂ, ಸೈಬರ್ ಅಪರಾಧಿಗಳು ಬೀಸುತ್ತಿರುವ ಬಲೆಗೆ ಸಿಲುಕುವುದನ್ನು ತಪ್ಪಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ, ಮನೆಯಿಂದ ಕೆಲಸ ಮಾಡುವ ನೆಪದಲ್ಲಿ ಮಹಿಳೆಯೊಬ್ಬರು ಸೈಬರ್ ಅಪರಾಧಿಗಳಿಂದ ವಂಚಿಸಲ್ಪಟ್ಟರು, ವರ್ಕ್ಫ್ರಮ್ ಹೋಂ ಕುರಿತು ಅಂತರ್ಜಾಲದಲ್ಲಿನ ಜಾಹೀರಾತನ್ನು ನಂಬಿದ ಮಹಿಳೆಯೋರ್ವರಿಗೆ ಸುಮಾರು ಎರಡೂವರೆ ಲಕ್ಷ ರು.ಗಳನ್ನು ವಂಚಿನೆ ಮಾಡಿರುವ ಪ್ರಕರಣ ನಡೆದಿದೆ.
ಚಿಕ್ಕಮಗಳೂರಲ್ಲಿ ಮಹಿಳೆಯೊಬ್ಬರಿಗೆ ಟೆಲಿಗ್ರಾಂ ಆ್ಯಪ್ ನಲ್ಲಿ ವರ್ಕ್ಫ್ರಮ್ ಹೊಂ ಮಾಡಲು ಇಷ್ಟವಿದ್ದರೆ ನಮ್ಮ ಜಾಹೀರಾತನ್ನು ಕ್ಲಿಕ್ ಮಾಡಿ ಎಂದು ವಂಚಕರು ಲಿಂಕ್ ಕಳುಹಿಸಿದ್ದರು. ಇದನ್ನು ನಂಬಿ ಮಹಿಳೆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ಅದರ ಸೂಚನೆ ಗಳನ್ನು ಪಾಲಿಸಿದ್ದಾರೆ. ಸೈಬರ್ವಂಚಕರು ಟಾಸ್ಕ್ಗಳನ್ನು ನೀಡಿ ಮೊದಲಿಗೆ ₹1000 ನಂತರ ₹1300 ನೀಡಿದ್ದಾರೆ. ಹಣ ಇನ್ವೆಸ್ಟ್ಮೆಂಟ್ ಮಾಡಿದರೆ ನಿಮಗೆ ದುಪ್ಪಟ್ಟು ಹಣ ನೀಡುತ್ತೇವೆಂದು ನಂಬಿಸಿ ಹಂತ ಹಂತವಾಗಿ ಒಟ್ಟು 2,57,600 ಪಡೆದು ಮೋಸ ಮಾಡಿದ್ದಾರೆ. ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








