ದಾವಣಗೆರೆ : ಪೋಷಕರೇ ಎಚ್ಚರ, ಮನೆಯಲ್ಲಿ ಕುದಿಯುವ ಸಾರು ಮೈಮೇಲೆ ಬಿದ್ದು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಮನೆಯಲ್ಲಿ ಎತ್ತರದ ಕಟ್ಟೆಯ ಮೇಲೆ ಇಟ್ಟಿದ್ದ ಕುದಿಯುತ್ತಿರುವ ಸಾರು ಮೈಮೇಲೆ ಬಿದ್ದ ಪರಿಣಾಮ 3 ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಗೊಲ್ಲರಹಟ್ಟಿ ನಿವಾಸಿ ಮಿಥುನ್ (3) ಮೃತ ಮಗು. ಕಟ್ಟೆಯಯ ಮೇಲೆ ಸ್ಟೌನಲ್ಲಿ ಕುದಿಯುತ್ತಿದ್ದ ಸಾರಿನ ಪಾತ್ರೆಯನ್ನು ಮಗು ಎಳೆದಿದ್ದರಿಂದ ಸುಡುವ ಸಾರು ಮೈಮೇಲೆ ಬಿದ್ದು ಸುಟ್ಟ ಗಾಯಗಳಾಗಿದ್ದವು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.