ಬೆಂಗಳೂರು : ಟ್ರಾಫಿಕ್ದಂಡದ ಮೊತ್ತವನ್ನು ಪಾವತಿಸುವವರೇ ಎಚ್ಚರ, ಸೈಬರ್ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡು ಲಿಂಕ್ ಕಳುಹಿಸಿ ನಿಮ್ಮ ಹಣಕ್ಕೆ ಕನ್ನ ಹಾಕುತ್ತಿದ್ದಾರೆ.
ಟ್ರಾಫಿಕ್ ದಂಡದ ಮೊತ್ತವನ್ನು ಪಾವಿಸಲು ಮುಂದಾದ ಬೆಂಗಳೂರಿನ ಟೆಕ್ಕಿಯೊಬ್ಬರು 2.65 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಂಚಾರ ಪೊಲೀಸರು 50% ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ನೀಡಿದ್ದಾರೆ. ವಂಚಕರು ಅಪರಿಚಿತ ಲಿಂಕ್ ಗಳನ್ನು ಕಳುಹಿಸುತ್ತಿದ್ದಾರೆ. ಈ ಮೆಸೇಜ್ಗಳನ್ನು ನಂಬಿದ ಹಲವರು ಅದನ್ನು ಓಪನ್ ಮಾಡಿದ ತಕ್ಷಣ ಅಕೌಂಟ್ ನಲ್ಲಿದ್ದ ಹಣ ಖಾಲಿಯಾಗುತ್ತಿದೆ.
ಕೊಡಿಗೇಹಳ್ಳಿ ವ್ಯಾಪ್ತಿಯ ಟೆಕ್ಕಿಯೊಬ್ಬರಿಗೆ ಸೈಬರ್ ವಂಚಕರು ಓಪನ್ ಮಾಡಿ ನಿಮ್ ವಾಹನದ ಫೈನ್ ಎಷ್ಟಿದೆ ಚೆಕ್ ಮಾಡಿಕೊಳ್ಳಿ ಅಂತಾ ಎಪಿಕೆ ಫೈಲ್ಕಳುಹಿಸಿದ್ದರು. ಆ ಮಸೇಜ್ ನಂಬಿದ ಟೆಕ್ಕಿ ಆ ಲಿಂಕ್ ನ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ 2.65 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮುರಳಿ ದೂರು ನೀಡಿದ್ದಾರೆ.
ನಿಮ್ಮ ಬಾಕಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿ ಮಾಡುವ ವಿಧಾನ
1.ಈ ಕೆಳಗಿನ ಮೊಬೈಲ್ ಆಪ್ಗಳನ್ನು ಬಳಸಿ (ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ನಲ್ಲಿ ಲಭ್ಯ):
ಕರ್ನಾಟಕ ರಾಜ್ಯ ಪೊಲೀಸ್ ಆಪ್
ಆಸ್ಟಮ್ (BTP/ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ)
ಪ್ರಕ್ರಿಯೆ:
1.ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ.
2. ನಿಮ್ಮ ವಾಹನದ ಫೋಟೋ/ವಿವರಗಳನ್ನು ಪರಿಶೀಲಿಸಿ.
3. ರಿಯಾಯಿತಿಯೊಂದಿಗೆ ದಂಡವನ್ನು ಪಾವತಿಸಿ.
2.ಯಾವುದೇ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮುಖೇನ ಪಾವತಿಸುವಿಕೆ.
3. ಸಂಚಾರ ನಿರ್ವಹಣಾ ಕೇಂದ್ರ (TMC)ಗೆ ಭೇಟಿ ನೀಡಿ:
ಮೊದಲನೇ ಮಹಡಿ, ಇನ್ಸಾಂಟ್ರಿ ರಸ್ತೆ, ಇಂಡಿಯನ್ ಎಕ್ಸ್ಪ್ರೆಸ್ ಹತ್ತಿರ, ಬೆಂಗಳೂರು