ಬೆಂಗಳೂರು : ಯುಪಿಐ ಬಳಸುವ ಅಂಗಡಿ ಮಾಲೀಕರೇ ಎಚ್ಚರವಾಗಿರಿ ಇದೀಗ ಹೊಸ ರೀತಿಯ ವಂಚನೆ ಜಾಲ ಪತ್ತೆಯಾಗಿದ್ದು, ನಿಮ್ಮ ಖಾತೆಯಿಂದ ನಿಮಗೆ ಗೊತ್ತಿಲ್ಲದೇ ಖದೀಮರು ಹಣ ಕದ್ದು ಪರಾರಿಯಾಗುತ್ತಾರೆ.
ಹೌದು, ಬೆಂಗಳೂರಿನಲ್ಲಿ ಖತರ್ನಾಕ್ ವಂಚಕರ ಗ್ಯಾಂಗ್ ವೊಂದು ಪತ್ತೆಯಾಗಿದ್ದು, ಗ್ರಾಹಕರು ಬ್ಯುಸಿ ಇರುವ ಸಮಯದಲ್ಲಿ ಬರುವ ವಂಚಕರು ಫೋನ್ ಫೇ, ಗೂಗಲ್ ಪೇ ಸರ್ವಿಸ್ ಮಾಡುವುದಾಗಿ ಹೇಳಿ ಮಾಲೀಕರ ಮೊಬೈಲ್ ತೆಗೆದುಕೊಂಡು 1 ರೂ ಹಣ ಹಾಕಿ ಸರಿಯಾಗಿದೆ. ಸರ್ವೀಸ್ ಆಗಿದೆ ಎಂದು ಹೇಳುತ್ತಾರೆ. ನಂತರ ಕೆಲವೇ ಕ್ಷಣದಲ್ಲಿ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡು ಎಸ್ಕೇಪ್ ಆಗುತ್ತಾರೆ.
ನೆಲಮಂಗದಲ್ಲಿ ಈ ರೀತಿಯ ವಂಚನೆಯ ಘಟನೆ ನಡೆದಿದ್ದು, ಸರ್ವೀಸ್ ಮಾಡುವ ನೆಪದಲ್ಲಿ 75,000 ಹಣ ವರ್ಗಾವಣೆ ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.