ದಾವಣಗೆರೆ : ಅಧಿಕ ಲಾಭ ಸಿಗುತ್ತದೆ ಎಂದು ಸಿಕ್ಕ ಸಿಕ್ಕಲ್ಲಿ ಹೂಡಿಕೆ ಮಾಡುವವರೇ ಎಚ್ಚರ, ದಾವಣಗೆರೆ ಜಿಲ್ಲೆಯಲ್ಲಿ ಎಂಜಿನಿಯರ್ ವೊಬ್ಬರು ಬರೋಬ್ಬರಿ 16 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಸೆ ತೋರಿಸಿ ಹರಿಹರ ತಾಲ್ಲೂಕಿನ ಹರಗನ-ಹಳ್ಳಿಯ ಎಂಜಿನಿಯರ್ ಗೆ 16.75 ಲಕ್ಷ ರೂ. ವಂಚಿಸಲಾಗಿದೆ. ಟೆಲಿಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದಾನೆ.
ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಂಭಾಂಶ ನೀಡಿದ್ದಾರೆ. ಇದನ್ನು ನಂಬಿದ ಎಂಜಿನಿಯರ್ ಹಂತಹಂತವಾಗಿ ಲಕ್ಷಾಂತರ ರೂ. ವರ್ಗಾವಣೆ ಮಾಡಿದ್ದಾರೆ. ಹಣವನ್ನು ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲು ಯತ್ನಿಸಿದಾಗ ಎಂಜಿನಿಯರ್ ಸೈಬರ್ ವಂಚನೆಗೆ ಒಳಗಾಗಿದ್ದು ತಿಳಿದುಬಂದಿದೆ. ವಂಚನೆ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








