ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮದುವೆ ಎಂದರೆ ಹೊಸ ಜೀವನ ಎನ್ನುತ್ತಾರೆ. ಆದ್ರೆ, ಇಂದಿನ ಯುವಜನತೆ ಭಿನ್ನವಾಗಿದೆ. ಮದುವೆಯ ಮಹತ್ವ ಗೊತ್ತಿಲ್ಲ. ಹೀಗಾಗಿ ಮದುವೆ ಜೊತೆಗೆ ಡಿವೋರ್ಸ್ ಕೂಡ ಸಾಮಾನ್ಯವಾಗಿದೆ.
ಇನ್ನು ಕುವೈತ್’ನಲ್ಲಿ ಮದುವೆಯಾದ 3 ನಿಮಿಷದಲ್ಲಿ ಮದುವೆ ಮುರಿದು ಬಿದ್ದಿದೆ. ವಿಚಿತ್ರವೆಂದ್ರೆ, ನ್ಯಾಯಾಧೀಶರೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಣ್ಣ ಕಾರಣಕ್ಕೆ ದಂಪತಿಗಳು ವಿಚ್ಛೇದನ ಪಡೆದಿದ್ದು, ಮದುವೆ ವೇದಿಕೆಯಲ್ಲೇ ವರ ಅವಮಾನ ಮಾಡಿದ್ದಕ್ಕೆ ಮನನೊಂದ ವಧು ಮದುವೆ ರದ್ದು ಮಾಡಿದ್ದಾರೆ. ತನಗೆ ವಿಚ್ಛೇದನ ನೀಡುವಂತೆ ನ್ಯಾಯಾಧೀಶರನ್ನ ಕೋರಿದಳು. ಆಕೆಯ ಮನವಿಯನ್ನ ಸ್ವೀಕರಿಸಿದ ನ್ಯಾಯಾಧೀಶರು ಪತಿ-ಪತ್ನಿ ಎಂದು ಘೋಷಿಸಿದ 3 ನಿಮಿಷಗಳಲ್ಲಿ ಇಬ್ಬರಿಗೂ ವಿಚ್ಛೇದನ ನೀಡಿದರು. ಈ ಘಟನೆ ನಡೆದಿದ್ದು 2019ರಲ್ಲಿ. ಆದ್ರೆ, ಈಗ ವೈರಲ್ ಆಗುತ್ತಿದೆ. ಈ ಹಿಂದೆ ನಡೆದ ಘಟನೆಯನ್ನ ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗುತ್ತಿದೆ.
ಆದರೆ ನೆಟ್ಟಿಗರು ಈ ಪೋಸ್ಟ್’ಗೆ ವಿವಿಧ ಕಾಮೆಂಟ್’ಗಳನ್ನ ಮಾಡುತ್ತಿದ್ದಾರೆ. ಆರಂಭದಲ್ಲೇ ಹೀಗೆ ಮುರಿದು ಬೀಳುವುದು ಒಳ್ಳೆಯದು ಎಂದು ಪ್ರತಿಕ್ರಿಯಿಸಿದರು. ಹೀಗೆ ಮಾಡುವ ಬದಲು ಮದುವೆಯಾಗುವ ಮುನ್ನವೇ ಬ್ರೇಕ್ ಅಪ್ ಆಗುವುದು ಸರಿ ಎಂದು ಬರೆದಿದ್ದಾರೆ. ಇನ್ನು ಕೆಲವರು ತಮ್ಮ ಅಭಿಪ್ರಾಯಗಳನ್ನು ಬೇರೆ ಬೇರೆ ರೀತಿಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತು 2004ರಲ್ಲಿ, ಯುನೈಟೆಡ್ ಕಿಂಗ್‌ಡಂನಲ್ಲಿ ದಂಪತಿಗಳು ವಿವಾಹವಾದ 90 ನಿಮಿಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಸ್ಕಾಟ್ ಮೆಕ್ಕಿ ಮತ್ತು ವಿಕ್ಟೋರಿಯಾ ಆಂಡರ್ಸನ್ ಅವರು ಪತಿ ಮತ್ತು ಹೆಂಡತಿ ಎಂದು ಉಚ್ಚರಿಸಿದ ಒಂದು ಗಂಟೆಯ ನಂತರ ಗ್ರೇಟರ್ ಮ್ಯಾಂಚೆಸ್ಟರ್’ನಲ್ಲಿರುವ ಸ್ಟಾಕ್‌ಪೋರ್ಟ್ ರಿಜಿಸ್ಟರ್ ಆಫೀಸ್’ನಲ್ಲಿ ವಿಚ್ಛೇಧನ ಪಡೆದಿದ್ದರು.
ಜುಲೈ 26ರಂದು ‘ದ್ರಾಸ್’ಗೆ ‘ಪ್ರಧಾನಿ ಮೋದಿ’ ಭೇಟಿ ; ‘ಕಾರ್ಗಿಲ್ ಯುದ್ಧದ ರಜತ ಮಹೋತ್ಸವ’ದಲ್ಲಿ ಭಾಗಿ
ಹಕ್ಕುಗಳಿಗಾಗಿ ಹೋರಾಟ ಎಷ್ಟು ಮುಖ್ಯವೋ ನಿರ್ಲಕ್ಷ ಮಾಡದೆ ಕರ್ತವ್ಯ ನಿರ್ವಹಿಸುವುದೂ ಅಷ್ಟೇ ಮುಖ್ಯ: ಪ್ರಿಯಾಂಕ್ ಖರ್ಗೆ
BREAKING : ದುಬೈ ಏರ್ಪೋರ್ಟ್’ನಲ್ಲಿ ಪಾಕಿಸ್ತಾನಿ ಖ್ಯಾತ ಗಾಯಕ ‘ರಾಹತ್ ಫತೇಹ್ ಅಲಿ ಖಾನ್’ ಅರೆಸ್ಟ್