ಬೆಂಗಳೂರು: ಕೆಪಿಸಿಸಿ ಉಪಾಧ್ಯಕ್ಷೆಯಾಗಿದ್ದಂತ ಅಕ್ಕೈ ಪದ್ಮಶಾಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ಅಕ್ಕೈ ಪದ್ಮಶಾಲಿ ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಡಾ.ಅಕ್ಕಯ್ ಪದ್ಮಶಾಲಿಯಾದ ನಾನು, ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು, ನನ್ನನ್ನು ತಮ್ಮ ಘನ ಅಧ್ಯಕ್ಷತೆಯಲ್ಲಿ ದಿನಾಂಕ 20/09/2020 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ-ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನನ್ನನ್ನು ಪಕ್ಷಕ್ಕೆ ಸೇರಿಸಿ ಸದಸ್ಯತ್ವ ಸ್ಥಾನವನ್ನು ನೀಡಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷೆಯ ಸ್ಥಾನವನ್ನು ನೀಡಿರುವುದ್ದಕ್ಕೆ, ನಾನು ತಮಗೆ ವಿಶೇಷವಾಗಿ ಆಭಾರಿಯಾಗಿರುತ್ತೇನೆ ಎಂದಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಾಗೂ ಲೈಂಗಿಕ ಕಾರ್ಯಕರ್ತೆಯರ ಸಮುದಾಯವನ್ನು ಸದಾ ನಮ್ಮ ಹೋರಾಟಗಳಿಗೆ ಬೆಂಬಲಿಸುತ್ತಾ ಬಂದಿದ್ದು, ದಿವಂಗತ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಡಾ.ಮನಮೋಹನ್ ಸಿಂಗ್, ದಿವಂಗತ ಪುಣಬ್ ಮುಖರ್ಜಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ದಿವಂಗತ ಆಸ್ಕರ್ ಫರ್ನಾಂಡಿಸ್, ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ್, ವೀರಪ್ಪ ಮೂಯ್ಲಿ, ಶಶಿ ತರೂರ್, ಬಿ ಕೆ. ಹರಿಪ್ರಸಾದ್, ಯುಟಿ ಖಾದರ್ ಹಾಗೂ ಇನ್ನಿತರ ಮಹನೀಯರನ್ನು ಸ್ಮರಿಸುತ್ತೇನೆ ಎಂದಿದ್ದಾರೆ.
ನಮ್ಮ ತುಳಿತಕ್ಕೊಳಗಾದ ಹಾಗೂ ಶೋಷಿತ ಅಂತರ್ಲಿಂಗಿ, ಲಿಂಗತ್ಯ ಹಾಗೂ ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆಯರ ಸಮುದಾಯವು ಇಂದಿನ ಪುಸ್ತುತ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಕಾನೂನು, ಮೂಲಭೂತ ಹಕ್ಕುಗಳ ಹಾಗೂ ನೀತಿ ನಿರೂಪಣೆಗಳ ನೆಲಗಟ್ಟಿನಿಂದ ತೀರಾ ಹಿಂದುಳಿದಿದ್ದು, ನಮ್ಮ ಸಮುದಾಯವನ್ನು ರಾಷ್ಟ್ರಾದ್ಯಂತ ಸಂಘಟಿಸುವ ಸಾಮಾಜಿಕ ಜವಾಬ್ದಾರಿ ಹಾಗೂ ಸಂವಿಧಾನದ ನೈತಿಕತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿಯನ್ನು ನಿಭಾಯಿಸುವ ಸಲುವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮ ನೀಡುತ್ತಿದ್ದೇನೆ. ಇದನ್ನು ತಾವುಗಳು ಈ ಕೂಡಲೇ ಅಂಗೀಕರಿಸಬೇಕಾಗಿ ವಿನಂತಿಸಿದ್ದಾರೆ.
ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್’ ಬಳಕೆಯಲ್ಲಿವೆ ಅಂತ ತಿಳಿಯಲು ಜಸ್ಟ್ ಹೀಗೆ ಮಾಡಿ | Mobile Connections
BREAKING: ‘ಕೆ.ಎನ್ ರಾಜಣ್ಣ ರಾಜೀನಾಮೆ’ ಅಂಗೀಕರಿಸಿದ ‘ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಬ್ಲೋಟ್’