ಹಾವೇರಿ: ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರಗಳಲ್ಲಿ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನವೂ ಒಂದಾಗಿದೆ. ಈ ದೇವರಗುಡ್ಡದ ಗೊರವಯ್ಯ ನುಡಿಯೆಂದ್ರೇ ತುಂಬಾನೇ ಪ್ರಸಿದ್ಧಿ. ಇಂದು ಆಕಾಶನ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್ ಎಂಬುದಾಗಿ ಐತಿಹಾಸಿಕ ದೇವರಗುಡ್ಡದ ಗೊರವಯ್ಯ ವಾರ್ಷಿಕ ಕಾರ್ಣಿಕ ನುಡಿ ನುಡಿದ್ದಾರೆ. ಅದರ ವಿವರಣೆ ಬಗ್ಗೆ ಮುಂದೆ ಓದಿ.
ಇಂದು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ಇಂದಿನ ಕಾರ್ಣಿಕೋತ್ಸವದಲ್ಲಿ ದೇವರಗುಡ್ಡದ ಮಾಲತೇಶಸ್ವಾಮಿಯ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ವಾರ್ಷಿಕ ಕಾರ್ಣಿಕ ನುಡಿಯನ್ನು ನುಡಿದರು.
ಆಕಾಶನ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್ ಎಂಬುದಾಗಿ ಭವಿಷ್ಯವಾಣಿಯನ್ನು ಗೊರವಪ್ಪ ನಾಗಪ್ಪಜ್ಜ ಉರ್ಮಿ ನುಡಿದಿದ್ದಾರೆ. ಇದರ ಅರ್ಥವನ್ನು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ವಿವರಿಸಿದ್ದು, ರಾಜ್ಯದಲ್ಲಿ ಮಳೆ, ಬೆಳೆ, ರಾಜಕೀಯ ಅನಾಹುತದ ಬಗ್ಗೆ ಭವಿಷ್ಯವಾಣಿ ಇದಾಗಿದೆ ಎಂದರು.
‘ಆಕಾಶದತ್ತ ಚಿಗುರಿತಲೆ’ ಎಂದರೆ ಒಳ್ಳೆ ಮಳೆ ಆಗುತ್ತೆ, ‘ಬೇರೆಲ್ಲ ಮುದ್ದಾಯಿತಲೇ’ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ ಅದನ್ನು ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ ಅಂತಾ ವಿಶ್ಲೇಷಣೆಯನ್ನು ಸಂತೋಷ್ ಭಟ್ ಗುರೂಜಿ ವಿವರಿಸಿ ಹೇಳಿದರು.
BIG BREAKING: ಕೇಂದ್ರ ಸಚಿವ ‘HDK’ ಸೇರಿ ಮೂವರ ವಿರುದ್ಧ ‘ADGP ಚಂದ್ರಶೇಖರ್’ ದೂರು, NCR ದಾಖಲು
ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮುಂದಿನವಾರ ಹೆಚ್ಚುವರಿ ಅಕ್ಕಿ ಹಣ ನಿಮ್ಮ ಖಾತೆಗೆ ಜಮಾ