ಬೆಂಗಳೂರು: ಐಶ್ವರ್ಯಗೌಡ ನನಗೆ ಪರಿಚಯವಿಲ್ಲ. ಆಕೆಯೊಂದಿಗೆ ಯಾವುದೇ ವ್ಯವಹಾರವೂ ಇಲ್ಲ. ಕನ್ನಡ ರಾಜ್ಯೋತ್ಸವಕ್ಕೆ ನನ್ನನ್ನು ಕರೆದಿದ್ರು. ಆಗ ನಾನು ಹೋಗಿದ್ದೆ ಎಂಬುದಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವಂತ ಇಡಿ ಕಚೇರಿಗೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾದ ಬಳಿಕ ಅವರು ಮಾತನಾಡಿದರು.
ಇಡಿ ವಿಚಾರಣೆಯಲ್ಲಿ ಏನು ಕೇಳಿದ್ದಾರೋ ಅದಕ್ಕೆ ಉತ್ತರಿಸಿದ್ದೇನೆ. ಜುಲೈ.8ರಂದು ಮತ್ತೆ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ. ಆಗಲೂ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು.
ಐಶ್ವರ್ಯಗೌಡ ನನಗೆ ಯಾವುದೇ ರೀತಿಯ ಪರಿಚಯವಿಲ್ಲ. ಕನ್ನಡ ರಾಜ್ಯೋತ್ಸವಕ್ಕೆ ನನ್ನ ಕರೆದಿದ್ರು, ನಾನು ಹೋಗಿದ್ದೆ. ಐಶ್ವರ್ಯಗೌಡ ಜೊತೆ ನನ್ನದು ಯಾವುದೇ ವ್ಯವಹಾರವೂ ಇಲ್ಲ. ರಾಜಕೀಯ ಪಿತೂರಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಅಂತ ಹೇಳಿದರು.
BREAKING: ವಂಚನೆ ಆರೋಪಿ ಐಶ್ವರ್ಯ ಗೌಡಗೆ ‘ED’ ಬಿಗ್ ಶಾಕ್: 3.98 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
BREAKING : 2 ದಿನದಲ್ಲಿ ರಾಜೀನಾಮೆ ಕೊಡಬಹುದು: ಶಾಸಕ ರಾಜು ಕಾಗೆ ಎಚ್ಚರಿಕೆಗೆ CM ಸಿದ್ದರಾಮಯ್ಯ ಹೇಳಿದ್ದೇನು?