ಬೆಂಗಳೂರು: ಡಿಕೆ ಸಹೋದರಿ ಎಂಬುದಾಗಿ ಬಂಗಾರದ ಅಂಗಡಿಯ ಮಾಲೀಕರಿಗೆ ಕೋಟಿ ಕೋಟಿ ವಂಚನೆಯನ್ನು ಐಶ್ವರ್ಯ ಗೌಡ ಮಾಡಿದ್ದರು. ಈ ಸಂಬಂಧ ಇಡಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಈ ಬೆನ್ನಲ್ಲೇ ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯ ಗೌಡ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿಯೊಂದಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾವೆ.
ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯ ಗೌಡ ಅವರು ವಿನಯ್ ಕುಲಕರ್ಣಿ ನನಗೆ ಪರಿಚಯ ಅಷ್ಟೇ ಅಂದಿದ್ದರು. ಆದರೇ ಶಾಸಕ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಿರೋ ಪೋಟೋಗಳು ವೈರಲ್ ಆಗಿದ್ದಾವೆ.
ಇದಷ್ಟೇ ಅಲ್ಲದೇ ವಿನಯ್ ಕುಲಕರ್ಣಿ ಜೊತೆಗೆ ಐಶ್ವರ್ಯ ಗೌಡ ವೀಡಿಯೋ ಕಾಲ್ ಮಾಡಿ, ವಾಟ್ಸ್ ಆಪ್ ಚಾಟ್ ಮಾಡಿರೋ ಪೋಟೋಗಳು ಬಹಿರಂಗಗೊಂಡಿದ್ದಾವೆ. ಈ ಮೂಲಕ ಐಶ್ವರ್ಯ ಗೌಡ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಪರಿಚಿತರು ಎಂಬುದನ್ನು ಹೇಳುತ್ತಿವೆ ಎನ್ನಲಾಗುತ್ತಿದೆ. ಆ ಬಗ್ಗೆ ಸದ್ಯ ಇಡಿ ನಡೆಸುತ್ತಿರುವಂತ ತನಿಖೆಯಲ್ಲಿ ಮತ್ತಷ್ಟು ಖಚಿತ ಮಾಹಿತಿ ಹೊರಬೀಳಬೇಕಿದೆ.
ಮನ್ ಕಿ ಬಾತ್: ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯವರ ಬಲವಾದ ಸಂದೇಶ, ಏಕತೆಗೆ ಒತ್ತು | Mann ki baat