Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂತರರಾಷ್ಟ್ರೀಯ ರೋಮಿಂಗ್ ಅನುಭವ ಕ್ರಾಂತಿಕಾರಿಗೊಳಿಸಲು ‘ಏರ್ಟೆಲ್’ನಿಂದ ಹೊಸ ಪ್ಲಾನ್ಸ್ ಪರಿಚಯ
KARNATAKA

ಅಂತರರಾಷ್ಟ್ರೀಯ ರೋಮಿಂಗ್ ಅನುಭವ ಕ್ರಾಂತಿಕಾರಿಗೊಳಿಸಲು ‘ಏರ್ಟೆಲ್’ನಿಂದ ಹೊಸ ಪ್ಲಾನ್ಸ್ ಪರಿಚಯ

By kannadanewsnow0920/05/2025 2:08 PM

ಬೆಂಗಳೂರು: ಭಾರತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಐಆರ್ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಸರಳ, ಹೆಚ್ಚು ಅಗ್ಗ ಮತ್ತು ಸಂಪೂರ್ಣವಾಗಿ ತಡೆ-ರಹಿತವನ್ನಾಗಿಸಲು ಹೊಸ ಪ್ಲಾನ್ಸ್ ಪ್ರಕಟಿಸಿದೆ. ಸಂಸ್ಥೆಯು 189 ದೇಶಗಳಾದ್ಯಂತ ಅನಿಯಮಿತ ಡೇಟಾ ಒದಗಿಸುವ ಭಾರತದ ಮೊಟ್ಟಮೊದಲ ಅನಿಯಮಿತ ಐಆರ್ ಪ್ಲಾನ್ಸ್ ಅನ್ನು ಅನಾವರಣಗೊಳಿಸಿದೆ.

ಹೆಚ್ಚುವರಿಯಾಗಿ, ದೀರ್ಘಕಾಲದವರೆಗೆ ಅನಿವಾಸಿ ಸಮುದಾಯದವರಿಗಾಗಿ, ಏರ್ಟೆಲ್ ಒಂದು-ವರ್ಷದ ವ್ಯಾಲಿಡಿಟಿಯೊಂದಿಗೆ ರೂ. 4000 ಗಳಿಗಾಗಿ ವಿಶಿಷ್ಟ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಪ್ಲಾನ್ ಮೂಲಕ ಗ್ರಾಹಕರು ವಿದೇಶದಲ್ಲಿದ್ದಾಗ 5ಜಿಬಿ ಡೇಟಾ ಮತ್ತು 100 ವಾಯ್ಸ್ ನಿಮಿಷಗಳನ್ನು ಪಡೆಯುವುದರ ಜೊತೆಗೆ ಅವರು ಭಾರತದಲ್ಲಿದ್ದಾಗಲೂ ಸಹ ಅದೇ ಪ್ಲಾನ್ ಬಳಸಬಹುದು ಮತ್ತು ಪ್ರತಿದಿನ 1.5 ಜಿಬಿ ಡೇಟಾ ಮತ್ತು ಅನಿಯಮಿತ ಕರೆ ಲಾಭಗಳನ್ನು ಸಹ ಪಡೆಯಬಹುದಾಗಿದೆ. ಈ ಪ್ಲಾನ್ ಮೂಲಕ ಗ್ರಾಹಕರು 189 ದೇಶಗಳಾದ್ಯಂತ ಎಲ್ಲಿಯಾದರೂ ತಡೆ-ರಹಿತ ಸಂಪರ್ಕ ಅನುಭವವನ್ನು ಪಡೆಯಬಹುದು ಮತ್ತು ಭಾರತದಲ್ಲಿದ್ದಾಗ ಸಹ ಯಾವುದೇ ಪ್ರತ್ಯೇಕ ರಿಚಾರ್ಜ್ ಇಲ್ಲದೆ ಅದೇ ಸಂಖ್ಯೆಯನ್ನು ಬಳಸಬಹುದು.

ಭಾರತಿ ಏರ್ಟೆಲ್ ಅವರ ಕನೆಕ್ಟೆಡ್ ಹೋಮ್ಸ್ ನ ಮಾರ್ಕೆಟಿಂಗ್ ನಿರ್ದೇಶಕರು ಮತ್ತು ಸಿಇಒ ಆಗಿರುವ ಸಿದ್ಧಾರ್ಥ್ ಶರ್ಮಾ ಅವರು ಈ ಕುರಿತು ಮಾತನಾಡಿ, “ಏರ್ಟೆಲ್ ನಲ್ಲಿ, ನಾವು ನಮ್ಮ ಗ್ರಾಹಕರ ಜೀವನವನ್ನು ಹೆಚ್ಚು ಸರಳವಾಗಿಸಲು ಪ್ರಯತ್ನಿಸುತ್ತೇವೆ. ಈ ಮೂಲಕ ನಾವು ಅವರಿಗೆ ಹೆಚ್ಚಿನ ಮೌಲ್ಯ ಹಾಗೂ ಅನುಕೂಲತೆಯನ್ನು ಒದಗಿಸುತ್ತೇವೆ. ನಾವು ನಮ್ಮ ಐಆರ್ ಪ್ಲಾನ್ ಗಳನ್ನು ಹೆಚ್ಚು ಸರಳೀಕೃತಗೊಳಿಸಿದ್ದೇವೆ, ಇದು ನಿಜಕ್ಕೂ ಗ್ರಾಹಕರಿಗಾಗಿನ ನಮ್ಮ ಮೌಲ್ಯ ಪ್ರತಿಪಾದನೆಯನ್ನು ಮತ್ತೊಮ್ಮೆ ಸಾರುತ್ತದೆ ಹಾಗೂ ಅವರು ಜಗತ್ತನ್ನು ಸುತ್ತುವಾಗ ಡೇಟಾ ಮತ್ತು ಕರೆಗಳನ್ನು ಸ್ವತಂತ್ರವಾಗಿ ಬಳಸಲು ಅವಕಾಶ ಮಾಡಿಕೊಡುತ್ತದೆ. ನಾವು ನಮ್ಮ ಗ್ರಾಹಕರ ಸದಾ-ಬದಲಾಗುವ ಅಗತ್ಯತೆಗಳನ್ನು ಪೂರೈಸಲು ಹೊಸ ಪರಿಹಾರಗಳನ್ನು ಒದಗಿಸುವಲ್ಲಿ ನಿರಂತರವಾಗಿ ಬದ್ಧರಾಗಿದ್ದೇವೆ.” ಎಂದರು.

ಗ್ರಾಹಕರು ಇವುಗಳನ್ನು ಒಳಗೊಂಡ ಪ್ಲಾನ್ ಗಳೊಂದಿಗೆ ಇತರ ಐಆರ್ ಲಾಭಗಳನ್ನು ಪಡೆಯುವುದನ್ನು ಮುಂದುವರೆಸುತ್ತಾರೆ:

● ಇನ್-ಫ್ಲೈಟ್(ವಿಮಾನದೊಳಗಿನ) ಸಂಪರ್ಕ, ಬೇರೆ ದೇಶಗಳಿಗೆ ತಲುಪಿದಾಕ್ಷಣ ಸೇವೆಗಳ ಸ್ವಯಂ-ಸಕ್ರಿಯ, 24X7 ಗ್ರಾಹಕ ಸೇವಾ ಬೆಂಬಲ

● 189 ದೇಶಗಳಿಗೆ ಪ್ರವಾಸ ಮಾಡಲು ಒಂದು ಪ್ಲಾನ್. ಯಾವ ವಲಯ ಅಥವಾ ಪ್ಯಾಕ್ ಆಯ್ಕೆ ಮಾಡಬೇಕು ಎನ್ನುವ ಗೊಂದಲವಿಲ್ಲ. ಅನೇಕ ದೇಶಗಳು ಅಥವಾ ಸಾರಿಗೆ ವಿಮಾನ ನಿಲ್ದಾಣಗಳಾದ್ಯಂತ ಅನೇಕ ಪ್ಯಾಕ್ಸ್ ಅಗತ್ಯವಿಲ್ಲ

● ಆಗಾಗ್ಗೆ ಪ್ರಯಾಣ ಮಾಡುವವರಿಗಾಗಿ ಸ್ವಯಂ-ರಿನೀವಲ್ ವೈಶಿಷ್ಟ್ಯ. ಇದರಿಂದ ಅನೇಕ ಸಲ ಪ್ಯಾಕ್ ಖರೀದಿ ಮಾಡುವ ಅಗತ್ಯ ಇರುವುದಿಲ್ಲ ಮತ್ತು ಇದರಿಂದ ಪ್ರಯಾಣ ಸುಗಮವಾಗುತ್ತದೆ.

● ಅಗ್ಗದ ಪ್ಯಾಕ್ಸ್. ಅನೇಕ ದೇಶದೊಳಗೆ/ಸ್ಥಳೀಯ ಸಿಮ್ ಗಳಿಗೆ ಹೋಲಿಸಿದರೆ ಇದು ಹೆಚ್ಚು ಅಗ್ಗ. ಇದು ಜಗತ್ತನ್ನು ಸುತ್ತುವವರಿಗೆ ಸಂಪರ್ಕದಲ್ಲಿರಲು ಸರಳೀಕೃತ ಪರಿಹಾರ ಕೊಡುವ ಜೊತೆಗೆ ಅವರಿಗೆ ಸ್ಥಳೀಯ ಸಿಮ್ ಕಾರ್ಡ್ ಪಡೆಯುವ ಖರ್ಚು ಮತ್ತು ತೊಂದರೆಗಳನ್ನು ನಿವಾರಿಸುತ್ತದೆ.

● ಗ್ರಾಹಕರ ಕೈಯಲ್ಲಿ ಎಲ್ಲಾ ನಿಯಂತ್ರಣ ಇರುತ್ತದೆ. ಅವರು ಏರ್ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ಡೇಟಾ ಬಳಕೆ, ಬಿಲ್ಲಿಂಗ್ ಮೊತ್ತ ಮತ್ತು ಡೇಟಾ ಸೇರ್ಪಡೆ ಅಥವಾ ಅಗತ್ಯ ನಿಮಿಷಗಳ ಸೇರ್ಪಡೆ ಕುರಿತು ಮಾಹಿತಿಯೊಂದಿಗೆ ತಮ್ಮ ಇಡೀ ಅಂತರರಾಷ್ಟ್ರೀಯ ರೋಮಿಂಗ್ ಅಗತ್ಯತೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

BREAKING: ನಾಳೆ, ನಾಡಿದ್ದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಿಗದಿಯಾಗಿದ್ದ ‘ರಾಜ್ಯದ ಪ್ರಗತಿ ಪರಿಶೀಲನಾ ಸಭೆ’ ಮುಂದೂಡಿಕೆ

ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

Share. Facebook Twitter LinkedIn WhatsApp Email

Related Posts

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

11/04/2026 8:25 PM2 Mins Read

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM2 Mins Read

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM2 Mins Read
Recent News

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
nitish kumar

ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಏಪ್ರಿಲ್ 13ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ; ಹೊಸ ನಾಯಕನ ಆಯ್ಕೆಗೆ ಕ್ಷಣಗಣನೆ!

11/04/2026 8:29 PM
State News
KARNATAKA

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

By kannadanewsnow0911/04/2026 8:25 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ವ್ಯಾಪ್ತಿಯಲ್ಲಿ ರಸ್ತೆ…

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM

ಪೋಷಕರೇ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

11/04/2026 4:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.