ಶಿವಮೊಗ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪನವರು ತಮ್ಮ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸೊರಬ ತಾಲೂಕಿನ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರಿಗೆ ವಿಮಾನಯಾನ ಮಾಡಿಸುವ ಮೂಲಕ ಅವರ ಮೊಗದಲ್ಲಿ ಮಂದಹಾಸ ಮೂಡಿಸಿ, ಸಮಾಜಕ್ಕೆ ಹೊಸ ಮಾದರಿಯನ್ನು ತೋರಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕ್ಷಿಯಾದರು. ಸಚಿವ ಮಧು ಬಂಗಾರಪ್ಪನವರಿಗೆ ಜನ್ಮದಿನದ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಬಳಿಕ ವಿಮಾನ ಪ್ರಯಾಣಕ್ಕೆ ಸಜ್ಜಾಗಿದ್ದ ಪೌರಕಾರ್ಮಿಕರೊಂದಿಗೆ ಆತ್ಮೀಯವಾಗಿ ಮಾತನಾಡಿದರು. “ಶ್ರಮಿಕ ವರ್ಗದವರನ್ನು ಈ ರೀತಿಯಾಗಿ ಸನ್ಮಾನಿಸುವುದು ಮತ್ತು ಅವರಿಗೆ ವಿಮಾನಯಾನದಂತಹ ಅಪರೂಪದ ಅವಕಾಶ ಕಲ್ಪಿಸುವುದು ಶ್ಲಾಘನೀಯ ಕೆಲಸ” ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ವಿಮಾನ ಹತ್ತಲು ಬಂದಿದ್ದ ಪೌರಕಾರ್ಮಿಕರ ಕಣ್ಣಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. “ನಮ್ಮ ಸೇವೆಯನ್ನು ಗುರುತಿಸಿ ಇಂತಹದೊಂದು ದೊಡ್ಡ ಅವಕಾಶ ನೀಡಿದ ಸಚಿವರಿಗೆ ನಾವು ಋಣಿ” ಎಂದು ಕಾರ್ಮಿಕರು ಭಾವುಕರಾಗಿ ನುಡಿದರು.
ಶಿವಮೊಗ್ಗದ ಮೃತ ಬಾಲಕ ಸಂಕೇತ್ ಕುಟುಂಬಕ್ಕೆ 15 ಲಕ್ಷ ಪರಿಹಾರ ಹಸ್ತಾಂತರಿಸಿದ ಸಿಎಂ ಸಿದ್ಧರಾಮಯ್ಯ
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ








