ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿರುವಂತ ಸಚಿವರ ವಿರುದ್ಧದ ಹನಿಟ್ರ್ಯಾಪ್ ಆರೋಪ ಯತ್ನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾದಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ರಾಜಕೀಯ, ರಾಜ್ಯದ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹನಿಟ್ರ್ಯಾಪ್ ಬಗ್ಗೆ ನಾನು ಹೇಳಲು ಆಗುತ್ತಾ? ಇಲ್ಲಿಯವರನ್ನೇ ಕೇಳಿ ಎಂಬುದಾಗಿ ತಿಳಿಸಿದರು.
ಸಿಎಂ ಸಿದ್ಧರಾಮಯ್ಯ ಅವರನ್ನು ಸೌಹಾರ್ಧ ಯುತವಾಗಿ ಭೇಟಿಯಾಗಿದ್ದೇನೆ. ಯೋಗಕ್ಷೇಮ ಕೇಳೋದು ನಮ್ಮ ಕರ್ತವ್ಯವಾಗಿದೆ. ಆ ಕಾರಣದಿಂದಲೇ ಇಂದು ಸಿದ್ಧರಾಮಯ್ಯ ಭೇಟಿಯಾಗಿರೋದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
‘ಯುಗಾದಿ, ರಂಜಾನ್ ಹಬ್ಬ’ಕ್ಕೆ ಊರಿಗೆ ಹೊರಟವರಿಗೆ ‘ನೈರುತ್ಯ ರೈಲ್ವೆ’ಯಿಂದ ಗುಡ್ ನ್ಯೂಸ್