ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಭಾಗಿಯಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಜಾಲಿ ಜಾಲಿ, ಜನಸಾಮಾನ್ಯರ ಜೇಬು ಖಾಲಿ ಖಾಲಿ, ನಗರ, ಗ್ರಾಮ ಪ್ರದೇಶದ ಎಲ್ಲಾ ಜನರು ಬಸವಳಿದು ಹೋಗಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು 2 ರೂಪಾಯಿ, ಅಡುಗೆ ಸಿಲಿಂಡರ್ ಬೆಲೆ 50 ರೂಪಾಯಿ ಜಾಸ್ತಿ ಮಾಡಿ ಬರೆ ಹಾಕಿದೆ. ಜನವರಿ 1ನೇ ತಾರೀಕು 2014 ರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ರೂ. 414 ಇತ್ತು. ಆದರೆ ಇಂದು ದುಪ್ಪಟ್ಟಾಗಿದೆ. ಬೆಂಗಳೂರಿನಲ್ಲಿ ರೂ. 855 ಆಗಿದೆ. ಕಾಂಗ್ರೆಸ್ ಸರ್ಕಾರದ ವೇಳೆಯಲ್ಲಿ ಏಕೆ ಸಿಲಿಂಡರ್ ಬೆಲೆ ಕಡಿಮೆಯಿತ್ತು ಎಂದರೆ ನಮ್ಮ ಸರ್ಕಾರ ಸುಮಾರು ರೂ.52 ಸಾವಿರ ಕೋಟಿಯನ್ನು ಸಬ್ಸಿಡಿ ಎಂದು ನೀಡುತ್ತಿತ್ತು.
ಬಿಜೆಪಿ ಸರ್ಕಾರ ಸಬ್ಸಿಡಿಯನ್ನು ರೂ.10 ಸಾವಿರ ಕೋಟಿಗೆ ಇಳಿಸಿತು. ಈ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ಇದು ಪ್ರಧಾನಿ ಮೋದಿ ಅವರ ಸಾಧನೆ. ಮೋದಿ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಿದ ಕಾರಣಕ್ಕೆ ರೂ.9.5 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಡವರಿಂದ, ಕೂಲಿ ಕಾರ್ಮಿಕರಿಂದ, ಜನಸಾಮಾನ್ಯರಿಂದ ಲೂಟಿ ಮಾಡುತ್ತಿದೆ.
181 ಕೋಟಿ ಸಿಲಿಂಡರ್ ಗಳು ಪ್ರತಿವರ್ಷ ಮಾರಾಟವಾಗುತ್ತವೆ. ಪ್ರತಿ ಸಿಲಿಂಡರ್ ಮೇಲೆ 50 ರೂಪಾಯಿ ಹೆಚ್ಚಳ ಮಾಡಿದರೆ ಎಷ್ಟು ಲೂಟಿ ಮಾಡುತ್ತಿರಬಹುದು ಎಂಬುದನ್ನು ನೀವು ಊಹಿಸಿ. ಕರ್ನಾಟಕದಲ್ಲಿ ಪ್ರತಿವರ್ಷ 10 ಕೋಟಿ 36 ಲಕ್ಷ ಸಿಲಿಂಡರ್ ಗಳು ಮಾರಾಟವಾಗುತ್ತವೆ. ಬೆಲೆಹೆಚ್ಚಳದಿಂದ ಪ್ರತಿವರ್ಷ ರೂ.500 ಕೋಟಿ ಹಣ ಕನ್ನಡಿಗರ ಮೇಲೆ ಬೀಳುತ್ತಿದೆ.
ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸುಮಾರು 34 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನನ್ನು ಪೆಟ್ರೋಲ್, ಡೀಸೆಲ್ ಮೇಲೆ ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಡೀಸೆಲ್ ಮೇಲಿನ ಅಬಕಾರಿ ಸುಂಕ ರೂ.3.14 ಪೈಸೆ ಮಾತ್ರ ಸಂಗ್ರಹ ಮಾಡುತ್ತಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಇದನ್ನು ರೂ.15. 80 ಪೈಸೆ ಹೆಚ್ಚು ಮಾಡಿ ಸುಲಿಗೆ ಮಾಡಲಾಗುತ್ತಿದೆ. ಆಟೋ ರಿಕ್ಷಾ ಡ್ರೈವರ್ ಗಳು, ಟ್ರಕ್ ಚಾಲಕರು ಈ ಹಣವನ್ನು ಲೂಟಿ ಮಾಡಲಾಗುತ್ತಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರೂ.9.20 ಪೈಸೆ ಮಾತ್ರ. ಮೋದಿ ಸರ್ಕಾರ ಇದನ್ನು ರೂ.19.90 ಪೈಸೆಗೆ ಜಾಸ್ತಿ ಮಾಡಿದೆ. ಪ್ರತಿ ಬಾರಿಯೂ ನೀವು ನಿಮ್ಮ ಬೈಕ್, ಕಾರನ್ನು ಓಡಿಸಿದಾಗಲೂ ಪ್ರತಿ ಲೀಟರ್ ಗೆ 20 ರೂಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೀರಿ. ಯುಪಿಯ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ 108 ಡಾಲರ್ ಇತ್ತು. ಇಂದು 66 ಡಾಲರ್ ಆಗಿದೆ. ಆದರೂ ಬೆಲೆಯನ್ನು ಇಳಿಕೆ ಮಾಡುತ್ತಿಲ್ಲ.
ಕರ್ನಾಟಕವೊಂದರಲ್ಲೇ 690 ಕೋಟಿ ಲೀಟರ್ ಪೆಟ್ರೋಲ್ ಅನ್ನು ಬಳಕೆ ಮಾಡಲಾಗುತ್ತಿದೆ. ರೈತರು, ಟ್ರಕ್ ಮಾಲೀಕರು ಪ್ರತಿವರ್ಷ 1613 ಕೋಟಿ ಡೀಸೆಲ್ ಅನ್ನು ಬಳಕೆ ಮಾಡಲಾಗುತ್ತಿದೆ. ಎರಡು ರೂಪಾಯಿ ಹೆಚ್ಚಳ ಮಾಡಿರುವ ಕಾರಣಕ್ಕೆ ರೂ.4,453 ಸಾವಿರ ಕೋಟಿ ಹಣವನ್ನು ಜನರ ಜೇಬಿನಿಂದ ಲೂಟಿ ಮಾಡಲಾಗುತ್ತಿದೆ. ಗ್ಯಾಸ್ ಹಾಗೂ ತೈಲ ಬೆಲೆ ಏರಿಕೆಯಿಂದ ಒಟ್ಟು ರೂ. 5,090 ಸಾವಿರ ಕೋಟಿ ಲೂಟಿ ಮಾಡಲಾಗುತ್ತಿದೆ.
ದೇಶದ ಜಿಡಿಪಿ ಜಾಸ್ತಿಯಾಗುತ್ತಿಲ್ಲ. ಆದರೆ ಬೆಲೆ ಏರಿಕೆ ಮಾತ್ರ ಜಾಸ್ತಿಯಾಗುತ್ತಿದೆ. ದೇಶದ ಜನರು ರೂ.50 ಸಾವಿರ ಕೋಟಿ ಹಣವನ್ನು ಹೆಚ್ಚುವರಿಯಾಗಿ ನೀಡುತ್ತಿದ್ದಾರೆ. ಇದರಲ್ಲಿ ನಮ್ಮ ಕನ್ನಡಿಗರ ಪಾಲು 5 ಸಾವಿರ ಕೋಟಿ. ಬಿಜೆಪಿ, ಜೆಡಿಎಸ್ ಸಂಸದರು ಯಾವ ನೈತಿಕತೆ ಇಟ್ಟುಕೊಂಡು ಸಚಿವ ಸ್ಥಾನ ಅನುಭವಿಸುತ್ತಾ ಇದ್ದಾರೆ. ಇವರಿಗೆ ಮೋದಿ ಅವರನ್ನು ಪ್ರಶ್ನಿಸುವ ಗುಂಡಿಗೆಯಿಲ್ಲವೇ? ಧೈರ್ಯವಿಲ್ಲವೇ?
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮೂಲಕ 53 ಸಾವಿರ ಕೋಟಿ ನೀಡುತ್ತಾ ಇದ್ದೇವೆ. ಇದರಿಂದ 5 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಕದಿಯುತ್ತಿದೆ. ಬೆಲೆ ಏರಿಕೆ ವಿರುದ್ದ ಕರ್ನಾಟಕದ ಮೂಲೆ, ಮೂಲೆಯಲ್ಲಿ ದೊಡ್ಡ ಹೋರಾಟ ರೂಪಿಸಬೇಕು. ಇದನ್ನು ಕೆಪಿಸಿಸಿ ಅಧ್ಯಕ್ಷರು ಇದರ ಉಸ್ತುವಾರಿವಹಿಸಿಕೊಳ್ಳಬೇಕು.
ಬಿಜೆಪಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಜನರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಇಡಿ ಚಾರ್ಜ್ ಶೀಟ್ ಹಾಕಲಾಗಿದೆ. ನಾವು ಬಡವರ ಪರವಾಗಿ ದನಿ ಎತ್ತುತ್ತೇವೆ ಎಂದು ದಾಳಿ ಮಾಡಲಾಗುತ್ತಿದೆ. ನಾವು ನೀವೆಲ್ಲರು ದುಬಾರಿ ಬಿಜೆಪಿ ಪಕ್ಷದ ವಿರುದ್ದ ಹೋರಾಟ ಮಾಡಬೇಕು. ನಮ್ಮ ಹೋರಾಟಕ್ಕೆ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು.
BREAKING: ಜಾತಿಗಣತಿ ವರದಿ ತಿರಸ್ಕರಿಸಬೇಕೆಂದು ಲಿಂಗಾಯತ ಸಮುದಾಯದ ಸಚಿವರ ಸಭೆಯಲ್ಲಿ ನಿರ್ಣಯ
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!