ಗುಜರಾತ್: ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ನಂತರ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್ಎ ಹೋಲಿಕೆಯಾಗಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ದೃಢಪಡಿಸಿದರು.
#WATCH | #AhmedabadPlaneCrash | Gujarat Home Minister Harsh Sanghvi says "Former Gujarat CM Vijay Rupani lost his life during the Air India crash in Ahmedabad on 12th June. Today, at around 11:10 AM, his DNA has matched. He worked for the people of the state for several years…" pic.twitter.com/4QYqOh2Eti
— ANI (@ANI) June 15, 2025
ಜೂನ್ 12 ರಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಾಣ ಕಳೆದುಕೊಂಡರು. ಇಂದು, ಬೆಳಿಗ್ಗೆ 11:10 ರ ಸುಮಾರಿಗೆ, ಅವರ ಡಿಎನ್ಎ ಹೊಂದಾಣಿಕೆಯಾಗಿದೆ. ಅವರು ಹಲವಾರು ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸ ಮಾಡಿದರು…” ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ.
ಅವರ ಪಾರ್ಥಿವ ಶರೀರದ ಸಾಗಣೆ ಮಾಡಲು ಮಾಜಿ ಸಿಎಂ ವಿಜಯ್ ರೂಪಾನಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ನೆರೆದಿದ್ದಾರೆ. ಇಂದೇ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ಅಹಮದಾಬಾದ್ ಏರ್ ಇಂಡಿಯಾ ಅಪಘಾತದಲ್ಲಿ ಸಾವನ್ನಪ್ಪಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಕೆಲವು ದಿನಗಳ ನಂತರ ಗುರುತಿಸಲಾಗಿದೆ