ಗುಜರಾತ್: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಏರ್ ಇಂಡಿಯಾ ವಿಮಾನವು ನಿನ್ನೆ ಪತನಗೊಂಡಿತ್ತು. ವಿಮಾನದಲ್ಲಿದ್ದಂತ 242 ಮಂದಿ ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ ಸೇರಿ 265 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಕಾರಣವಾದಂತ ಮಾಹಿತಿ ನೀಡುವಂತ ವಿಮಾನದಲ್ಲಿದ್ದ ಎಮರ್ಜೆನ್ಸಿ ಲೊಕೇಟರ್ ಟ್ರಾನ್ಸ್ ಮೀಟರ್ ಪತ್ತೆಯಾಗಿದೆ.
ಪ್ರತಿಯೊಂದು ವಿಮಾನದಲ್ಲಿ ಒಂದು ನಿರ್ಣಾಯಕ ಸುರಕ್ಷತಾ ಸಾಧನವೆಂದರೇ ಅದು ಎಮರ್ಜೆನ್ಸಿ ಲೊಕೇಟರ್ ಟ್ರಾನ್ಸ್ ಮೀಟರ್ ಆಗಿದೆ. ATS ಎಂಬುದಾಗಿಯೇ ಕರೆಯುವಂತ ಇದು ವಿಮಾನ ದುರಂತದಂತ ಸಂದರ್ಭದಲ್ಲಿ ಒಂದು ನಿರ್ಣಾಯಕ ಸುರಕ್ಷತಾ ಸಾಧನವಾಗಿದೆ. ಎಟಿಎಸ್ ತೊಂದರೆಯ ಸಂಕೇತಗಳನ್ನು ಕಳುಹಿಸಲು ಮತ್ತು ಪತನಗೊಂಡ ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
Ahmedabad Plane Crash | Contrary to some reports, the video recorder being circulated is not the DFDR (Digital Flight Data Recorder). The black box was found on the rooftop. AAIB began work with full force immediately. Over 40 staff from the State Government joined efforts to… pic.twitter.com/emstqF3G9l
— ANI (@ANI) June 13, 2025