ಕೆಎನ್ಎನ್ ಪೊಲಿಟಿಕಲ್ ಡೆಸ್ಕ್: ರಾಜ್ಯ ವಿಧಾನಸಭಾ ಚುನಾವಣೆ ( Karnataka Assembly Election 2022 ) ಸಮೀಪಿಸುತ್ತಿದ್ದಂತೇ, ಹಲವು ಹಾಲಿ ಕಾಂಗ್ರೆಸ್ ಶಾಸಕರಿಗೆ ( Congress MLA ) ಸೋಲಿನ ಭೀತಿ ಎದುರಾಗಿದೆ. ಹತ್ತಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗಿದೆ. ಇದೆಲ್ಲವೂ ಇತ್ತೀಚಿಗೆ ಕಾಂಗ್ರೆಸ್ ನಡೆಸಿದಂತ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ಶಾಸಕರು ಕೂಡ ಚುನಾವಣೆಯ ( Election ) ವೇಳೆಗೆ ಬಂಡಾಯವೇಳಲಿದ್ದು, ಕೈ ಪಕ್ಷಕ್ಕೆ ಬಂಡಾಯದ ಭೀತಿ ಕೂಡ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಹೌದು.. ಕೆಲವರಿಗೆ ಕಾರ್ಯಕರ್ತರ ಜೊತೆಗೆ ಸಂಪರ್ಕ ಹೊಂದಿಲ್ಲದೇ ಇರೋದು ಇದರ ದೊಡ್ಡ ಮೈನಸ್ ಪಾಯಿಂಟ್ ಎನ್ನಲಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ ಕೂಡ, ಜನರ ಸಂಪರ್ಕ, ಕೈಗೆ ಸಿಗದೇ ಇರೋ ಆರೋಪ ಕೂಡ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಯೇ ಶಾಸಕರ ಕಾರ್ಯವೈಖರಿಯೂ ಕೆಲ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದಾಗಿ ಸಮೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದೆಯಂತೆ.

BJP Karnataka: ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು – ಬಿಜೆಪಿ

ಇನ್ನೂ ಆಂತರಿಕ ಸಮೀಕ್ಷಾ ವರದಿಯಿಂದ ಎಚ್ಚೆತ್ತುಕೊಂಡಿರುವಂತ ಕರ್ನಾಟಕ ಪ್ರದೇಶ ಕಾಂಗ್ರೆಸ್, ಸೋಲುವ ಶಾಸಕರಿಗೆ, ಚುನಾವಣೆಯ ವೇಳೆಗೆ ತಮ್ಮ ಕ್ಷೇತ್ರದಲ್ಲಿ ಜನರೊಂದಿಗೆ, ಕಾರ್ಯಕರ್ತರೊಂದಿಗೆ ತೊಡಗಿಸಿಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ. ಸೋಲುವ ಶಾಸಕರಿಗೆ ಈಗಲೇ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ ಎಂದು ತಿಳಿದು ಬಂದಿದೆ.

ಇದಷ್ಟೇ ಅಲ್ಲದೇ ವರದಿಯನ್ನು ಆಧರಿಸಿ, ತಮ್ಮ ನ್ಯೂನ್ಯತೆ, ಕ್ಷೇತ್ರಗಳಲ್ಲಿನ ಗೊಂದಲ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸೋಲುವ ಹಾಲಿ ಶಾಸಕರಿಗೆ ಈ ಸೂಚನೆಯನ್ನು ಕಾಂಗ್ರೆಸ್ ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ. ಹಾಗಾದ್ರೇ.. ಸೋಲುವ ಭೀತಿಯಲ್ಲಿರುವಂತ ಹಾಲಿ ಶಾಸಕರು ಯಾರ್ ಯಾರ್ ಎನ್ನುವ ಪಟ್ಟಿ ಈ ಕೆಳಗಿದೆ.

BREAKING NEWS: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಮನೆಗೆ ಪ್ರತಿಭಟನಾಕಾರರಿಂದ ಬೆಂಕಿ: ಧಗಧಗಿಸಿ ಹೊತ್ತಿ ಉರಿಯುತ್ತಿರುವ ನಿವಾಸ | Sri Lanka crisis

ಸೋಲುವ ಭೀತಿ ಹೊಂದಿರುವ ಶಾಸಕರು ಹಾಗೂ ಅವರ ಕ್ಷೇತ್ರಗಳು

  • ದೊಡ್ಡ ಬಳ್ಳಾಪುರ – ವೆಂಕಟರಮಣಯ್ಯ
  • ಕಂಪ್ಲಿ – ಗಣೇಶ್
  • ಹಡಗಲಿ – ಪರಮೇಶ್ವರ್ ನಾಯಕ್
  • ಕುಣಿಗಲ್ – ಡಾ.ರಂಗನಾಥ್
  • ಖಾನಾಪುರ – ಅಂಜಲಿ ನಿಂಬಾಳ್ಕರ್
  • ಕೆಜಿಎಫ್ – ರೂಪಾ
  • ಗೌರಿಬಿದನೂರು – ಶಿವಶಂಕರರೆಡ್ಡಿ
  • ಶೃಂಗೇರಿ – ರಾಜೇಗೌಡ
  • ಆನೇಕಲ್ – ಶಿವಣ್ಣ
  • ಪುಲಕೇಶಿನಗರ – ಅಖಂಡ ಶ್ರೀನಿವಾಸ್ ಮೂರ್ತಿ
  • ಶಿವಾಜಿನಗರ – ರಿಜ್ವಾನ್ ಅರ್ಷದ್
  • ಕಲಬುರಗಿ ಉತ್ತರ – ಫಾತಿಮಾ
  • ಹರಿಹರ – ರಾಮಪ್ಪ
  • ಕುಂದಗೋಳ – ಕುಸುಮಾ ಶಿವಳ್ಳಿ
Share.
Exit mobile version