ರಾಜಸ್ಥಾನ : ಅಗ್ನಿಪಥ್ ಯೋಜನೆ ಕುರಿತು ರಾಜಸ್ಥಾನ ಕಂದಾಯ ಸಚಿವ ರಾಮಲಾಲ್ ಜಾಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಗ್ನಿಪಥ್ ಯೋಜನೆಯು ದೇಶವನ್ನು ‘ಭಯೋತ್ಪಾದನೆ ತರಬೇತಿ’ಯತ್ತ ಕೊಂಡೊಯ್ಯಲಿದೆ ಎಂದೇಳಿದ್ದಾರೆ.

ಸಂಸದರು ಮತ್ತು ಶಾಸಕರು ಹುದ್ದೆಯಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರವೂ ಪಿಂಚಣಿ ಪಡೆಯಬಹುದು. ಆದರೆ ಅಗ್ನಿವೀರರಿಗೆ ಏಕೆ ಪಿಂಚಣಿ ನೀಡಬಾರದು? ಅಗ್ನಿವೀರ್ ಯೋಜನೆಯಡಿ ಮೂರ್ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಯುವಕರು ನಿರುದ್ಯೋಗಿಗಳಾದಾಗ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರ ಯುವಜನರ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.

ಭಾರತೀಯ ಯುವಕರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಹೊಸ ಅಲ್ಪಾವಧಿ ನೇಮಕಾತಿ ನೀತಿಯನ್ನು ಜೂನ್ 14 ರಂದು ಕೇಂದ್ರ ಘೋಷಿಸಿತ್ತು. ಅಗ್ನಿಪಥ್ ಎಂದು ಕರೆಯಲ್ಪಡುವ ಈ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಮೂರು ಸೇವೆಗಳಲ್ಲಿ “ಅಗ್ನಿವೀರ” ಆಗಿ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತೀಯ ಸೇನೆಯಲ್ಲಿ ‘ಅಗ್ನಿವೀರ್ಸ್’ ಒಂದು ವಿಭಿನ್ನ ಶ್ರೇಣಿಯನ್ನು ರೂಪಿಸುತ್ತದೆ ಎಂದು ಸೇನೆಯು ಹೇಳಿದೆ. ಅದು ಅಸ್ತಿತ್ವದಲ್ಲಿರುವ ಯಾವುದೇ ಶ್ರೇಣಿಗಳಿಗಿಂತ ಭಿನ್ನವಾಗಿರುತ್ತದೆ. ಅವರನ್ನು ಯಾವುದೇ ರೆಜಿಮೆಂಟ್ ಮತ್ತು ಘಟಕಕ್ಕೆ ಪೋಸ್ಟ್ ಮಾಡಬಹುದು.

Share.
Exit mobile version