ಬೆಂಗಳೂರು: ರಾಜ್ಯದ ಬಗ್ಗೆ ಈ ಹಿಂದೆ ಅನೇಕ ರೀತಿಯ ಭವಿಷ್ಯವನ್ನು ಕೋಡಿಮಠದ ಶ್ರೀಗಳು ಹೇಳಿದ್ದರು. ಇದೀಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ್ದಾರೆ. ಅದೇ ಯುಗಾದಿ ನಂತ್ರ ಒಳ್ಳೆಯ ಮಳೆಯಾಗಿ ಬೆಳೆ ಬಂದ್ರೇ, ಧಾರ್ಮಿಕ ಮುಖಂಡನ ಸಾವು ಕೂಡ ಆಗಲಿದೆ ಎಂಬುದಾಗಿದೆ.

ಈ ಕುರಿತಂತೆ ಕೋಲಾರದ ಮಾಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಯವರು, ರಾಜ್ಯದಲ್ಲಿ ಯುಗಾದಿ ಕಳೆದ ನಂತ್ರ, ಒಳ್ಳೆ ಬೆಳೆ, ಮಳೆಯಾಗುವ ಲಕ್ಷಣಗಳಿವೆ ಎಂದಿದ್ದಾರೆ.

ಇನ್ನೂ ಮತಾದಂತೆ ಹೆಚ್ಚಾಗಲಿದೆ. ಬಾಂಬ್ ಸ್ಟೋಟಗೊಳ್ಳಲಿದೆ. ಭೂಕಂಪ ಆಗುತ್ತದೆ. ಧಾರ್ಮಿಕ ಮುಖಂಡನ ಸಾವು ಕೂಡ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆಯಲ್ಲಿ ಗ್ಯಾರೆಂಟ್ ಗಳಿಂದ‌ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

BIG NEWS: ರಾಜ್ಯ ಸರ್ಕಾರದಿಂದ ‘BMTC ನೌಕರರ ಕುಟುಂಬ’ಕ್ಕೆ ಗುಡ್ ನ್ಯೂಸ್: ‘1 ಕೋಟಿ ಅಪಘಾತ ವಿಮಾ ಸೌಲಭ್ಯ’ ಜಾರಿ

Share.
Exit mobile version