ಬೆಂಗಳೂರು: ಮುಡಾ ಹಗರಣದ ಕಾನೂನು ಸಂಕಷ್ಟ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ತಮಗೆ ಮುಡಾದಿಂದ ನೀಡಿದ್ದಂತ 14 ಸೈಟ್ ಗಳನ್ನು ವಾಪಾಸ್ ಮಾಡಿದ್ದರು. ಇದೇ ಹಾದಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಹಿಡಿದಿದ್ದಾರೆ. ತಮಗೆ ಕೆಐಡಿಎಬಿಯಿಂದ ನೀಡಲಾಗಿದ್ದಂತ ಐದು ಎಕರೆ ಭೂಮಿಯನ್ನು ವಾಪಾಸ್ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದಿಂದಲೂ ಭೂ ಹಗರಣ ನಡೆಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕ ಎನ್ ಆರ್ ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕುಟುಂಬದಿಂದಲೂ 5 ಎಕರೆ ಭೂಮಿಯನ್ನು ಕೆಐಎಡಿಬಿ ಸಂಸ್ಥೆಗೆ ವಾಪಾಸ್ ನೀಡಲಾಗಿದೆ.
ಅಂದಹಾಗೇ ಮಲ್ಲಿಕಾರ್ಜುನ ಖರ್ಗೆ ಕುಟುಂಬದಿಂದ ಸಿದ್ದಾರ್ಥ್ ವಿಹಾರ ಟ್ರಸ್ಟ್ ನಿಂದ ಒಂದೇ ಕಾರಣಕ್ಕೆ ಒಂದೇ ಸಂಸ್ಥೆಯಿಂದ ಎರಡು ಬಾರಿ ಸರ್ಕಾರಿ ಭೂಮಿಯನ್ನು ಪಡೆಯಲಾಗಿದೆ ಎಂಬುದಾಗಿ ಬಿಜೆಪಿಯ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈಗ ಈ ಟ್ರಸ್ಟ್ ಗೆ ಎರಡು ಬಾರಿ ನೀಡಲಾಗಿದ್ದಂತ 5 ಎಕರೆ ಭೂಮಿಯನ್ನು ವಾಪಾಸ್ ನೀಡಲಾಗಿದೆ.
BREAKING : ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರ : ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ