ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ನಿರಂತರ ಊಹಾಪೋಹಗಳ ನಡುವೆಯೇ, ಸಿದ್ದರಾಮಯ್ಯ ಅವರ ಪುತ್ರ ಎಂಎಲ್‌ಸಿ ಹೇಳಿಕೆಯು ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಯತೀಂದ್ರ ಅವರು ಅವರು ತಮ್ಮ ರಾಜಕೀಯ ಜೀವನದ ಅಂತಿಮ ಹಂತದಲ್ಲಿದ್ದಾರೆ ಅಂಥ ಹೇಳಿದ್ದಾರೆ.
ಅವರು ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕು. ಸತೀಶ್ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. ವೈಚಾರಿಕವಾಗಿ ಪ್ರಗತಿಪರವಾಗಿ ಸಿದ್ದಾಂತ ಇಟ್ಟುಕೊಂಡಿರುವವರಿಗೆ ಮಾರ್ಗದರ್ಶಶನ, ನೇತೃತ್ವ ವಹಿಸಿಕೊಳ್ಳಲು ಒಬ್ಬ ನಾಯಕ ಬೇಕು. ಸತೀಶ್ ಜಾರಕಿಹೊಳಿಯವರು ಅಂತಹ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥರಿದ್ದಾರೆ ಎಂದಿದ್ದಾರೆ.