ಮಂಗಳೂರು: ಬೀದರ್ ನಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಎಟಿಎಂಗೆ ತುಂಬಲು ತಂದಿದ್ದಂತ ಹಣವನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದ ಘಟನೆ ಹಸಿರಾಗಿರೋ ಮುನ್ನವೇ, ಮಂಗಳೂರಲ್ಲಿ ಇಂತದ್ದೇ ಘಟನೆ ನಡೆದಿದೆ.
ಮಂಗಳೂರಿನ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ ನುಗ್ಗಿರುವಂತ ಐವರು ದರೋಡೆಕೋರರ ತಂಡವು, ಬಂದೂಕು ತೋರಿಸಿ ಹಾಡಹಗಲೇ ಚಿನ್ನ, ಒಡವೆ ನಗದು ದೋಚಿ ಪರಾರಿಯಾಗಿದೆ.
ಫಿಯೇಟ್ ಕಾರಿನಲ್ಲಿ ಬಂದಂತ ಐವರ ತಂಡ ಈ ಕೃತ್ಯವೆಸಗಿ ಪರಾರಿಯಾಗಿದೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.