ಮಂಡ್ಯ: ಬೆಂಗಳೂರಿನ ನವರತ್ನ ಜ್ಯೂವೆಲ್ಲರಿ ಮಾಲೀಕರಿಗೆ, ಶಿವಮೊಗ್ಗದ ಸಾಗರದ ಪ್ರಗತಿ ಜ್ಯೂವೆಲ್ಲರಿ ಮಾಲೀಕರಿಗೆ ಐಶ್ವರ್ಯ ಗೌಡ ಲಕ್ಷ, ಕೋಟಿ ಬೆಲೆ ಬಾಳುವ ಚಿನ್ನಾಭರಣ ಪಡೆದು, ವಂಚಿಸಿತ್ತದ್ದರು. ಈ ಬಳಿಕ ಮಂಡ್ಯದ ಚಿನ್ನದ ವ್ಯಾಪಾರಿಗೂ 55 ಲಕ್ಷ ವಂಚನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೇ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಹಣ ವಾಪಾಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಪೂರ್ವ ಠಾಣೆಯ ಪೊಲೀಸರಿಗೆ ಈ ಸಂಬಂಧ ಮಾಲೀಕರಾದಂತ ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವರು ಕಳೆದ 8 ವರ್ಷಗಳ ಹಿಂದೆ 55 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ಐಶ್ವರ್ಯ ಗೌಡ ಹಣ ನೀಡದೇ ವಂಚಿಸಿರೋದಾಗಿ ದೂರು ನೀಡಲಾಗಿದೆ.
ಇನ್ನೂ ಮಂಡ್ಯದ ಕೆ ಎಂ ದೊಡ್ಡಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದಂತ ಜ್ಯೂವೆಲ್ಲರಿ ಮಾಲೀಕರು ನಮ್ಮ ಹಣವನ್ನು ವಾಪಾಸ್ಸು ಕೊಡಿಸುವಂತೆ ಮನವಿ ಮಾಡಿದರು.
ಈ ಮನವಿಯನ್ನು ಆಲಿಸಿದಂತ ಹೆಚ್ ಡಿಕೆ, ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ, ಗಂಭೀರವಾಗಿ ಅವರು ಈ ಪ್ರಕರಣ ಪರಿಗಣಿಸುತ್ತಾರೆ ಎಂಬುದಾಗಿ ತಿಳಿಸಿದರು.
ನೀವು ಮೊದಲೇ ಯಾಕೆ ಈ ವಿಚಾರ ತಿಳಿಸಿಲ್ಲ ಎಂದು ಪ್ರಶ್ನಿಸಿದಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, 8 ವರ್ಷಗಳ ಹಿಂದೆ ಚಿನ್ನಾಭರಣ ನೀಡಿದ್ದಕ್ಕೆ ಈಗ ಹಣ ನೀಡಿಲ್ಲ ಅಂತ ದೂರುತ್ತಿದ್ದೀರಿ. ನಾನು ನಿಮ್ಮ ಪರವಾಗಿ ಧ್ವನಿಯಾಗಿರುತ್ತೇನೆ. ನಿಮ್ಮ ಜೊತೆಗೆ ನಾನಿದ್ದೇನೆ ಎಂಬುದಾಗಿ ವಂಚನೆಗೆ ಒಳಗಾದವರಿಗೆ ಭರವಸೆ ನೀಡಿದರು.
BREAKING : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ `ಯುವನಿಧಿ’ ವಿಶೇಷ ನೋಂದಣಿ ಅಭಿಯಾನ : ಸರ್ಕಾರ ಮಹತ್ವದ ಆದೇಶ.!
ರಾಜ್ಯದ `ಕಾರ್ಮಿಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!