ಚಿಕ್ಕಬಳ್ಳಾಪುರ: ರಾಜ್ಯಕ್ಕೂ ಆಫ್ರಿಕನ್ ಹಂದಿ ಜ್ವರವು ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಆಫ್ರಿಕನ್ ಹಕ್ಕಿಜ್ವರ ಕಾಲಿಟ್ಟಿದ್ದು, ಜ್ವರದ ಕೇಸ್ ಪತ್ತೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಯಾರ್ಕ್ ಶೇರ್ ತಳಿಯ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಗ್ರಾಮದ ಬಳಿಯಲ್ಲಿರುವಂತ ಫಾರ್ಮ್ ನಲ್ಲಿನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ.
ಈಗಾಗಲೇ ಆಫ್ರಿಕನ್ ಹಂದಿ ಜ್ವರದಿಂದಾಗಿ 100 ಹಂದಿಗಳು ಸಾವನ್ನಪ್ಪಿದ್ದಾವೆ. 57 ಹಂದಿ ಕೊಲ್ಲಲು ನಿರ್ಧರಿಸಲಾಗಿದೆ. ಕಳೆದ ಒಂದು ವಾರದಿಂದ ಫಾರ್ಮ್ ನಲ್ಲಿ ಹಂದಿಗಳು ಸರಣಿ ಸಾಲಿನಲ್ಲಿ ಸಾವನ್ನಪ್ಪಿದ್ದಾವೆ.
ಹಂದಿಗಳ ಸರಣಿ ಸಾವಿನಿಂದಾಗಿ ಮಾದರಿಯನ್ನು ಸಂಗ್ರಹಿಸಿ ಭೂಪಾಲ್ ನ ರಾಷ್ಟ್ರೀಯ ಲ್ಯಾಬ್ ಗೆ ಕಳುಹಿಸಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ ಎಂಬುದಾಗಿ ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ ಮಾಹಿತಿ ನೀಡಿದ್ದಾರೆ. ಅಲ್ಲದೇ ಫಾರ್ಮ್ ನಿಂದ ಹಂದಿಗಳ ಸಾಗಾಟ, ಮಾರಾಟವನ್ನು ನಿಷೇಧಿಸಲಾಗಿದೆ.
ಅಂದಹಾಗೇ ಈ ಫಾರ್ಮ್ ಹೌಸ್ ನಿಂದ ಹಂದಿಗಳನ್ನು ಹೊಸಕೋಟೆ ಮೂಲಕ ನಾಗಾಲ್ಯಾಂಡ್ ಗೆ ರವಾನಿಸಲಾಗುತ್ತಿತ್ತು. ಹಂದಿಗಳಿಗೆ ಆಫ್ರಿಕನ್ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸೋಂಕಿತ ಹಂದಿಗಳಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ. ಆಫ್ರಿಕನ್ ಹಂದಿ ಜ್ವರದ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ ಎಂಬುದಾಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ನಟ ದರ್ಶನ್ ಪತ್ನಿ, ಪುತ್ರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ: ಕಾನೂನು ಕ್ರಮಕ್ಕೆ ಮಹಿಳಾ ಆಯೋಗ ಸೂಚನೆ
ಶಿವಮೊಗ್ಗ: ಈ ದಿನದಂದು ಜಿಲ್ಲೆಯಲ್ಲಿ ‘ಮದ್ಯ ಮಾರಾಟ’ ಬಂದ್ – ಡಿಸಿ ಆದೇಶ
BIG NEWS: ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಬದುಕಿಸಿದ ಕಾರ್ಗಲ್ ಠಾಣೆ PSI ನಾಗರಾಜ್: ಹೇಗೆ ಗೊತ್ತಾ?