ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ ‘ಕೋಟಿ ಅವಕಾಶಗಳ ಪಥ’ ಎನ್ನುವ ಧ್ಯೇಯವನ್ನು ಹೊಂದಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಏರೋ ಇಂಡಿಯಾ ಮಾಹಿತಿ ಹಂಚಿಕೊಂಡಿದ್ದು, ಏರೋ ಇಂಡಿಯಾ 2025 – ವಾಯು ಶಕ್ತಿಯ ಮಹಾ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರಲ್ಲಿ ಮುಂಬರುವ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದೆ ಎಂದಿದೆ.
ಭಾರತದ ಅತ್ಯಾಧುನಿಕ ತಂತ್ರಜ್ಞಾನ, ವಾಯುಪಡೆಯ ಶಕ್ತಿ ಮತ್ತು ನಮ್ಮ ರಾಷ್ಟ್ರದ ಭದ್ರತೆಗೆ ಸಮರ್ಪಿತವಾದ ಶಕ್ತಿಯನ್ನು ಪ್ರದರ್ಶಿಸುವ ವಿಸ್ಮಯಕಾರಿ ಮತ್ತು ಜಾಗತಿಕವಾಗಿ ಆಕರ್ಷಿಸುವ ಏರ್ ಶೋಗೆ ಸಾಕ್ಷಿಯಾಗಿ! ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ರಕ್ಷಣೆಯಲ್ಲಿ ಭಾರತ ಎಷ್ಟು ಮುಂದುವರಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಜ್ಞಾನ ಮತ್ತು ಶಾಂತಿಯ ಈ ಭವ್ಯ ಪ್ರದರ್ಶನವನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿ ಮನವಿ ಮಾಡಿದೆ.
ಇನ್ನೂ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರು https://www.aeroindia.gov.in/visitor-registration ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ ‘ಕೋಟಿ ಅವಕಾಶಗಳ ಪಥ’ ಎನ್ನುವ ಧ್ಯೇಯವನ್ನು ಹೊಂದಿದೆ.#AeroIndia | #Airshow | #AeroIndia2025 | @AeroIndiashow pic.twitter.com/JUEs1jUDUp
— DD Chandana News (@DDChandanaNews) January 6, 2025
Good News: ‘KSRTC ನೌಕರ’ರಿಗೆ ಗುಡ್ ನ್ಯೂಸ್: ‘ನಗದು ರಹಿತ ಚಿಕಿತ್ಸಾ ಯೋಜನೆ’ ಜಾರಿ