ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುಪಡೆ ನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ಏರೋ ಇಂಡಿಯಾ ಶೋ ನಡೆಯಲಿದ್ದು, ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ.
ಏರೋ ಇಂಡಿಯಾದಲ್ಲಿ ಒಟ್ಟು 90 ದೇಶಗಳು ಪಾಲ್ಗೊಳ್ಳುತ್ತಿದ್ದು, ಏರ್ ಶೋದಲ್ಲಿ 70 ಕ್ಕೂ ಹೆಚ್ಚು ಪ್ರದರ್ಶನ ನೀಡಲಿರುವ ಯುದ್ದ ವಿಮಾನ, ಸರಕು ,ತರಬೇತಿ ವಿಮಾನಗಳು. ಏರ್ ಶೋ ನೋಡಲು 5 ದಿನಗಳಲ್ಲಿ 7 ಲಕ್ಷ ಜರು ಆಗಮಿಸುವ ನಿರೀಕ್ಷೆ ಇದೆ.
ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಟಿಕೆಟ್ ದರ ಎಷ್ಟು?
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ 50 ಯುಎಸ್ ಡಾಲರ್ ಇರಲಿದೆ.
ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ
ವಿದೇಶಿಗರಿಗೆ 50 ಯುಎಸ್ ಡಾಲರ್
ವ್ಯಾಪಾರ ಪಾಸ್ : ಭಾರತೀಯರಿಗೆ 5,000 ರೂ.
ವಿದೇಶಿಗರಿಗೆ : 50 ಯುಎಸ್ ಡಾಲರ್ ಇರಲಿದೆ.
ಏರ್ ಶೋ 2025ರ ಟಿಕೆಟ್ ಬುಕ್ ಮಾಡುವುದು ಹೇಗೆ?
ನೀವು ಮೊದಲು ಏರೋ ಇಂಡಿಯಾದ ವೆಬ್‌ಸೈಟ್ aeroindia.gov.in ಅನ್ನು ಓಪನ್ ಮಾಡಬೇಕು
ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಯಾವ ಪಾಸ್ ಬೇಕು ಎಂದು ಆಯ್ಕೆ ಮಾಡಬೇಕು.
ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನು ಆ್ಯಡ್ ಮಾಡಬೇಕು.
ಬಳಿಕ ಹಣ ಪಾವತಿ ಮಾಡಿ. ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಟಿಕೆಟ್ ಬುಕ್ ಆಗಲಿದೆ.
ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ದಿನಾಂಕ: 10-02-2025 ರಿಂದ ದಿನಾಂಕ:14-02-2025 ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ- 2025 ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದೆ.
ದಿನಾಂಕ:10-02-2025 ರ ಬೆಳಿಗ್ಗೆ ಸದರಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಗಣ್ಯರು ಹಾಗು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ನಡೆಯುವ ಸ್ಥಳವು ಯಲಹಂಕ ವಾಯುಸೇನಾ ನೆಲೆಯು ಬೆಂಗಳೂರು-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ-44 (ಅಂತರಾಷ್ಟ್ರೀಯ ಏರ್‌ಮೊರ್ಟ್ ರಸ್ತೆ) ಗೆ ಹೊಂದಿಕೊಂಡಿದ್ದು, ಸದರಿ ರಸ್ತೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಸುಗಮ ಸಂಚಾರದ ದೃಷ್ಠಿಯಿಂದ ದಿನಾಂಕ:10-02-2025 ರಂದು ಬೆಳಗಿನ ಜಾವ 05-00 ಗಂಟೆಯಿಂದ ದಿನಾಂಕ:14-02-2025ರವರೆಗೆ ರಾತ್ರಿ 10-00 ರವರೆಗೆ ಈ ಕೆಳಕಂಡ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದಿದೆ.
1. ಏಕಮುಖ ಸಂಚಾರ ವ್ಯವಸ್ಥೆ:
* ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
* ಬಾಗಲೂರು ಮುಖ್ಯರಸ್ತೆ : (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)
2. ಏರೋ ಇಂಡಿಯಾ ಪಾರ್ಕಿಂಗ್:
ಉಚಿತ ಪಾರ್ಕಿಂಗ್ ಜಿ.ಕೆ.ವಿ.ಕೆ. ಕ್ಯಾಂಪಸ್ : ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಅಡ್ವಾ ಪಾರ್ಕಿಂಗ್ (Air Display View Area) ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ ವಾಪಸ್ ಜಿಕೆವಿಕೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎ.ಸಿ. ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಿದೆ.
ಆ) ಪಾವತಿ ಪಾರ್ಕಿಂಗ್:
ಅಡ್ವಾ ಪಾರ್ಕಿಂಗ್(Air Display View Area) : ಗೇಟ್ ನಂ. 08 & 09 ರ ಮುಖಾಂತರ ಪ್ರವೇಶ
ಡೊಮೆಸ್ಟಿಕ್ ಪಾರ್ಕಿಂಗ್ (Domnestic Paking) : ಗೇಟ್ ನಂ. 05ರ ಮುಖಾಂತರ ಪ್ರವೇಶ
* ಸೂಚಿಸಲಾದ ಮಾರ್ಗಗಳು :
* ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (Air Display View Area) ಪಾರ್ಕಿಂಗ್ ಕಡೆ ಬರುವವರಿಗೆ
ಕೆ ಆರ್ ಪುರ – ನಾಗವಾರ ಜಂಕ್ಷನ್ – ಬಲತಿರುವು – ಥಣೀಸಂದ್ರ – ನಾರಾಯಣಪುರ ಕ್ರಾಸ್ – ಎಡ ತಿರುವು – ಟೆಲಿಕಾಂ ಲೇಔಟ್ – ಜಕ್ಕೂರು ಕ್ರಾಸ್ – ಬಲ ತಿರುವು – ಯಲಹಂಕ ಬೈಪಾಸ್ – ಯಲಹಂಕ ಕಾಫಿ ಡೇ – ಪಾಲನಹಳ್ಳಿ ಗೇಟ್ – ಸರ್ವೀಸ್ ರಸ್ತೆ ( ಗ್ರೀಲ್ ಓಪನ್ ) ಪೋರ್ಡ್ ಷೋ ರೂಂ – ಎಡ ತಿರುವು – ನಿಟ್ಟೇ ಮೀನಾಕ್ಷಿ ಕಾಲೇಜ್ ರಸ್ತೆ – ADV Parking
* ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆ ಬರುವವರಿಗೆ:
ಕೆ.ಆರ್. ಪುರಂ – ಹೆಣ್ಣೂರು ಕ್ರಾಸ್ – ಬಾಗಲೂರು – ಹುಣಸಮಾರನಹಳ್ಳಿ – ಕೊತ್ತನೂರು ಗುಬ್ಬಿ ಕ್ರಾಸ್ – ಕಣ್ಣೂರು ವಿದ್ಯಾನಗರ ಕ್ರಾಸ್ – ಬಾಗಲೂರು ಲೇಔಟ್ – ರಜಾಕ್ ಪಾಳ್ಯ – Domestic Parking
* ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರಿಗೆ
ಗೊರಗುಂಟೆಪಾಳ್ಯ ಉನ್ನಿಕೃಷ್ಣನ್ ರಸ್ತೆ – ದೊಡ್ಡಬಳ್ಳಾಪುರ ರಸ್ತೆ – ಬಿ.ಇ.ಎಲ್ ವೃತ್ತ ಮದರ್ ಡೈರಿ ಜಂಕ್ಷನ್ – ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್- ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು – ನಾಗೇನಹಳ್ಳಿ ಗೇಟ್ – ಗಂಟಿಗಾನಹಳ್ಳಿ ಸರ್ಕಲ್ ಬಲ ತಿರುವು – ಹಾರೋಹಳ್ಳಿ – ಗಂಟಿಗಾನಹಳ್ಳಿ ಸರ್ಕಲ್ ಮೂಲಕ- ADVA Parking
* ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ
ಮೈಸೂರು ರಸ್ತೆ, ನಾಯಂಡನಹಳ್ಳಿ, ಚಂದ್ರಾ ಲೇಔಟ್, ಗೋರಗುಂಟೆಪಾಳ್ಯ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಎಂ ಎಸ್ ಪಾಳ್ಯ ಸರ್ಕಲ್, ಮದರ್ ಡೈರಿ, ಉನ್ನಿ ಕೃಷ್ಣನ್ ಜಂಕ್ಷನ್, ಎಡ ತಿರುವು, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಬಲತಿರುವು, ಅದ್ದಿಗಾನಹಳ್ಳಿ, ಎಂವಿಐಟಿ ಕ್ರಾಸ್, ವಿದ್ಯಾನಗರ ಕ್ರಾಸ್, ಯು ತಿರುವು ಪಡೆದು, ಹುಣಸಮಾರನಹಳ್ಳಿ ಮೂಲಕ Domestic Parking.
* ಬೆಂಗಳೂರು ದಕ್ಷಿಣ ದಿಕ್ಕಿನಿಂದ ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರಿಗೆ
ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್-ಗೊರಗುಂಟೆಪಾಳ್ಯ-ಬಿ.ಇ.ಎಲ್ ವೃತ್ತ- ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ ದೊಡ್ಡಬಳ್ಳಾಪುರ ಮುಖ್ಯ ರಸ್ತೆ -ನಾಗೇನಹಳ್ಳಿ ಗೇಟ್ -ಬಲ ತಿರುವು -ಹಾರೋಹಳ್ಳಿ ಗಂಟಿಗಾನಹಳ್ಳಿ ಸರ್ಕಲ್ ಮೂಲಕ- ADVA Parking,
ಎಡ
* ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ :
ಮೈಸೂರು ರಸ್ತೆ-ನಾಯಂಡನಹಳ್ಳಿ ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ -ಬಿ.ಇ.ಎಲ್ ವೃತ್ತ- ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ-ಉನ್ನಿ ಕೃಷ್ಣನ್ ಜಂಕ್ಷನ್ ತಿರುವು-ದೊಡ್ಡಬಳ್ಳಾಪುರ ರಸ್ತೆ- ರಾಜಾನುಕುಂಟೆ- ಬಲ ತಿರುವು- ಅದ್ದಿಗಾನಹಳ್ಳಿ ಎಂ.ವಿ.ಐ.ಟಿ ಕ್ರಾಸ್ – ವಿದ್ಯಾನಗರ ಕ್ರಾಸ್-ಯು ತಿರುವು ಪಡೆದು ಹುಣಸಮಾರನಹಳ್ಳಿ ಮೂಲಕ Domestic ಪಾರ್ಕಿಂಗ್.
3. ಕೆಂಪೇಗೌಡ ಅಂತರಾಷ್ಟ್ರೀಯ.ವಿಮಾನ ನಿಲ್ದಾಣ (KIAL) ಕಡೆಗೆ ತಲುಪಲು ಪರ್ಯಾಯ ಮಾರ್ಗ :
* ಬೆಂಗಳೂರು ಪೂರ್ವ ದಿಕ್ಕಿನಿಂದ :
ಕೆ.ಆರ್.ಪುರಂ-ಹೆಣ್ಣೂರು ಕ್ರಾಸ್ -ಕೊತ್ತನೂರು – ಗುಬ್ಬಿ ಕ್ರಾಸ್ – ಕಣ್ಣೂರು ಬಾಗಲೂರು ಮೈಲನಹಳ್ಳಿ – ಬೇಗೂರು -ನೈರುತ್ಯ ಪ್ರವೇಶದ್ವಾರದ ಮೂಲಕ- KIAL ತಲುಪಬಹುದು.
* ಬೆಂಗಳೂರು ಪಶ್ಚಿಮ ದಿಕ್ಕಿನಿಂದ :
ಗೊರಗುಂಟೆಪಾಳ್ಯ ಮದರ್ ಡೈರಿ – ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ
ಎಂ.ಎಸ್ ಪಾಳ್ಯ ಸರ್ಕಲ್ – ಉನ್ನಿ ಕೃಷ್ಣನ್ ಜಂಕ್ಷನ್- ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ – ರಾಜಾನುಕುಂಟೆ – ಅದ್ದಿಗಾನಹಳ್ಳಿ – ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್ – ವಿದ್ಯಾನಗರ ಕ್ರಾಸ್ ಮೂಲಕ – KIAL ತಲುಪುವುದು.
* ಬೆಂಗಳೂರು ದಕ್ಷಿಣ ದಿಕ್ಕಿನಿಂದ :
ಮೈಸೂರು ರಸ್ತೆ- ನಾಯಂಡನಹಳ್ಳಿ- ಚಂದ್ರಾ ಲೇಔಟ್ ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್ – ಮದರ್‌ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ – ಅದ್ದಿಗಾನಹಳ್ಳಿ-ಎಂ.ವಿ.ಐ.ಟಿ ಕ್ರಾಸ್
– ವಿದ್ಯಾನಗರ ಕ್ರಾಸ್ ಮೂಲಕ KIAL ತಲುಪಬಹುದು.
4. ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೇ ಭಾರೀ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ನಿರ್ಬಂಧಿಸಿರುವ ರಸ್ತೆಗಳ ವಿವರ:
• ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ, ಮೇ ವೃತ್ತದಿಂದ-ಎಂವಿಐಟಿ ಕ್ರಾಸ್ ವರೆಗೆ ಮತ್ತು ಎಂ.ವಿ.ಐ.ಟಿ. ಕ್ರಾಸ್ ನಿಂದ ಮೇ ವೃತ್ತದ ವರೆಗೆ, ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್ ವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
ನಾಗವಾರ ಜಂಕ್ಷನ್‌ನಿಂದ — ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ. ರೇವಾ ಕಾಲೇಜ್ ಜಂಕ್ಷನ್‌ವರೆಗೆ ಸಂಚಾರವನ್ನು ನಿಷೇಧಿಸಲಾಗಿದೆ. ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
5. ವಾಹನ ನಿಲುಗಡೆ ನಿಷೇಧ ( ಎಲ್ಲಾ ಮಾದರಿಯ ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ)
–
ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು-ಬಳ್ಳಾರಿ ರಸ್ತೆಯನ್ನು ಸೇರುವ ಫೋರ್ಡ್ ಷೋರೂಂ ಕ್ರಾಸ್‌ವರೆಗೆ (ಬಿಬಿ ರಸ್ತೆ) ವರೆಗೆ
ಬೆಂಗಳೂರು-ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ ನಿಂದ-ದೇವನಹಳ್ಳಿ ವರೆಗೆ.
ಬಾಗಲೂರು ಕ್ರಾಸ್ ಜಂಕ್ಷನ್ ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರು ವರೆಗೆ.
ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್ ವರೆಗೆ.
ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್ ವರೆಗೆ.
ಹೆಣ್ಣೂರು ಕ್ರಾಸ್ ನಿಂದ ಬೇಗೂರು ಬ್ಯಾಕ್ ಗೇಟ್ ವರೆಗೆ
ನಾಗೇನಹಳ್ಳಿ ಗೇಟ್ ಜಂಕ್ಷನ್ ನಿಂದ ಯಲಹಂಕ ಸರ್ಕಲ್ ವರೆಗೆ.
ಸೂಚನೆ:
·ಎಂವಿಐಟಿ ಕ್ರಾಸ್ ನಿಂದ ನಾರಾಯಣಪುರ ರೈಲ್ವೆ ಕ್ರಾಸ್ ವರೆಗೆ.
ಕೋಗಿಲು ಕ್ರಾಸ್ ಜಂಕ್ಷನ್ ನಿಂದ ಕಣ್ಣೂರು ಜಂಕ್ಷನ್ ವರೆಗೆ.
ಮತ್ತಿಕೆರೆ ಕ್ರಾಸ್ ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ ವರೆಗೆ. ಜಾಲಹಳ್ಳಿ ಕ್ರಾಸ್ ಜಂಕ್ಷನ್ ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್ ವರೆಗೆ.
ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್/ಪಾಸ್‌ನ QR ಕೋಡನ್ನು ಮೊದಲೇ ಸ್ಕ್ಯಾನ್ ಮಾಡಿ ಯಾವ ಗೇಟ್‌ನಿಂದ ಪ್ರವೇಶಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಪ್ರಯಾಣಿಸಿದ್ದಲ್ಲಿ ಅನವಶ್ಯಕ ವಿಳಂಬಕ್ಕೆ ಅವಕಾಶವಿರುವುದಿಲ್ಲ.
ವೀಕ್ಷಣೆಗೆ ಬರುವವರು ಉಚಿತ ವಾಹನ ನಿಲುಗಡೆ ಲಭ್ಯವಿರುವ ಜಿ.ಕೆ.ವಿ.ಕೆ. ಆವರಣವನ್ನು ಮತ್ತು ಶಟಲ್ ಬಸ್ ಸೇವೆಯನ್ನು ಉಪಯೋಗಿಸಲು ಕೋರಿದೆ.
ಸಾರ್ವಜನಿಕರು ಸಹಕರಿಸಲು ಕೋರಿದೆ.