ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಈ ಕೆಳಕಂಡ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಲಾಗಿದೆ ಎಂದಿದ್ದಾರೆ.
ಹೀಗಿದೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರು, ಸದಸ್ಯರ ಪಟ್ಟಿ
- ಕನ್ನಡ ಮತ್ತು ಸಂಸ್ಕೃತಿ ಸಚಿವರು, ಅಧ್ಯಕ್ಷರು
- ಡಾ.ಸಿಎಸ್ ದ್ವಾರಕನಾಥ್, ಸದಸ್ಯರು
- ರವಿಕುಮಾರ್, ಮಾಜಿ ಮುಖ್ಯ ಕಾರ್ಯದರ್ಶಿ, ಸದಸ್ಯರು
- ಸದಾಶಿವ ಮರ್ಜಿ, ಧಾರವಾಡ, ಸದಸ್ಯರು
- ಬಾಬು ಭಂಡಾರಿಗಲ್, ರಾಯಚೂರು, ಸದಸ್ಯರು
- ಶೈಲಜಾ ಹಿರೇಮಠ, ಕೊಪ್ಪಳ, ಸದಸ್ಯರು
- ರಂಜಾನ್ ದರ್ಗಾ, ಗುಲ್ಬರ್ಗಾ, ಸದಸ್ಯರು
- ವೈಸಿ ಭಾನುಮತಿ, ಮೈಸೂರು, ಸದಸ್ಯರು
- ಪ್ರೊ ಜಿ ಶರಣಪ್ಪ, ಚಿತ್ರದುರ್ಗ, ಸದಸ್ಯರು
- ಪ್ರೊ.ದೊಣ್ಣೆಗೌಡರು ವೆಂಕಣ್ಣ, ಯಾದಗಿರಿ, ಸದಸ್ಯರು
- ಹಿರೇಮಗಳೂರು ಕಣ್ಣನ್, ಸದಸ್ಯರು
- ಪುಷ್ಪ ಶಿವಕುಮಾರ್, ಶಿಕಾರಿಪುರ, ಸದಸ್ಯರು
- ಡಾ.ರತ್ನಮ್ಮ, ಚಾಮರಾಜನಗರ, ಸದಸ್ಯರು
- ಶರಣಪ್ಪ ವಡಿಗೇರಿ, ಕೊಪ್ಪಳ, ಸದಸ್ಯರು
- ಡಾ.ತಿಮ್ಮಪ್ಪ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ
- ಡಾ.ಕ್ಯಾಪ್ಟನ್ ಕೃಷ್ಣಮೂರ್ತಿ, ವಿಜಯನಗರ, ಸದಸ್ಯರು
- ಪಂ.ಎಂ ವೆಂಕಟೇಶ್ ಕುಮಾರ್, ಧಾರವಾಡ, ಸದಸ್ಯರು
- ಡಾ.ಕೆ.ಕುಮಾರ್, ಮೈಸೂರು, ಸದಸ್ಯರು
- ಸಿ ಬಸವಲಿಂಗಯ್ಯ, ಮೈಸೂರು, ಸದಸ್ಯರು
- ಪಿ.ತಿಪ್ಪೇಸ್ವಾಮಿ, ಚಿತ್ರದುರ್ಗ, ಸದಸ್ಯರು
- ಶ್ರೀರಾಮ ಇಟ್ಟಣ್ಣನವರ, ಬೀಳಗಿ, ಸದಸ್ಯರು
- ಸಿಹಿ ಕಹಿ ಚಂದ್ರು, ಬೆಂಗಳೂರು, ಸದಸ್ಯರು
- ಜಯಣ್ಣಚಾರ್, ಚಿಕ್ಕಮಗಳೂರು, ಸದಸ್ಯರು
- ಮಲ್ಲಿಕಾರ್ಜನ ಹೊಸಪಾಳ್ಯ, ತುಮಕೂರು, ಚಿತ್ರದುರ್ಗ
- ಹೆಚ್.ಕೆ ಶ್ರೀಕಂಡ, ಸದಸ್ಯರು
- ಸಿ.ಚಂದ್ರಶೇಖರ್, ಬೆಂಗಳೂರು, ಸದಸ್ಯರು
- ಹಂಸಲೇಖ, ಬೆಂಗಳೂರು, ಸದಸ್ಯರು
- ರವಿಚಂದ್ರನ್, ಬೆಂಗಳೂರು, ಸದಸ್ಯರು
- ಪ್ರೊ.ರಾಧಾಕೃಷ್ಣ, ಸದಸ್ಯರು
- ಪ್ರೊ.ಕೃಷ್ಣೇಗೌಡ, ಮೈಸೂರು, ಸದಸ್ಯರು
- ಸಿದ್ದರಾಜು, ಬೆಂಗಳೂರು, ಸದಸ್ಯರು
- ನಾಗೇಶ್ ಹೆಗಡೆ, ಬೆಂಗಳೂರು ಸದಸ್ಯರು
- ಕೆ.ಚನ್ನಪ್ಪ, ಬಳ್ಳಾರಿ, ಸದಸ್ಯರು
- ಎ.ಬಿ ಸುಬ್ಬಯ್ಯ, ಕೊಡಗು, ಸದಸ್ಯರು
- ಜೋಸೆಫ್ ಹೂವರ್, ಬೆಂಗಳೂರು, ಸದಸ್ಯರು
- 13 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಲಾಗಿದೆ.
- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ 18ನೇ ಕಂತನ್ನು ‘ಪ್ರಧಾನಿ ಮೋದಿ’ ಬಿಡುಗಡೆ | PM Kisan Samman Nidhi
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್