Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಲು ಬೆರಳಿಗೆ ಕಪ್ಪು ದಾರ: ಮಹಿಳೆಯರ ಈ ಸಮಸ್ಯೆಗೆ ರಾಮಬಾಣ ಈ ಪುಟ್ಟ ಉಪಾಯ !

26/02/2026 12:02 PM

ತಪ್ಪಿಗೆ ಹೊಣೆ ಯಾರು?: ಎನ್‌ಸಿಇಆರ್‌ಟಿ ಪುಸ್ತಕದ ವಿವಾದಾತ್ಮಕ ಅಂಶಗಳ ಬಗ್ಗೆ ಆಳವಾದ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

26/02/2026 12:02 PM

ಜನಸಾಮಾನ್ಯರಿಗೆ ಬಿಗ್ ರಿಲೀಫ್ : `ಅಡುಗೆ ಎಣ್ಣೆ’ ಬೆಲೆಯಲ್ಲಿ ಇಳಿಕೆ | Cooking Oil Price Cut

26/02/2026 11:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಲಿಂಗನಮಕ್ಕಿ ಪವರ್ ಚಾನಲ್’ಗೆ ಅಳವಡಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕುಸಿತ, ಹೆಚ್ಚಿದ ಆತಂಕ
KARNATAKA

BIG NEWS: ‘ಲಿಂಗನಮಕ್ಕಿ ಪವರ್ ಚಾನಲ್’ಗೆ ಅಳವಡಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕುಸಿತ, ಹೆಚ್ಚಿದ ಆತಂಕ

By kannadanewsnow0926/11/2025 1:33 PM

ಶಿವಮೊಗ್ಗ: ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯವು ನಾಡಿಗೆ ಬೆಳಕು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗೆ ಪ್ರಮುಖ ವಿದ್ಯುತ್ ಉತ್ಪಾದನೆ ಕೇಂದ್ರವಾಗಿರುವಂತ ಲಿಂಗನಮಕ್ಕಿಯ ಪವರ್ ಚಾನಲ್ ಗೆ ಹೆಚ್ಚುವರಿಯಾಗಿ ಕಟ್ಟಿದ್ದಂತ ಕಾಂಕ್ರೀಟ್ ತಡೆಗೋಡೆ ಕುಸಿತಗೊಂಡು ಆಂತಕಕ್ಕೆ ಕಾರಣವಾಗಿದೆ.

ಕಳಪೆ ಕಾಮಗಾರಿ ಎಫೆಕ್ಟ್, ಕೋಟಿ ಕೋಟಿ ಕಾಮಗಾರಿ 6 ತಿಂಗಳಲ್ಲೇ ಕುಸಿತ

ಹೌದು.ನಾಡಿಗೆ ಬೆಳಕು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಸಾಗರ ತಾಲ್ಲೂಕಿನ ಕಾರ್ಗಲ್ ಬಳಿಯ ಲಿಂಗನಮಕ್ಕಿ ಜಲಾಶಯದ ಸ್ಲ್ಯೂಸ್ ಗೇಟ್ ಮುಂಭಾಗದಲ್ಲಿ ತಳಕಳಲೆ ಅಣೆಕಟ್ಟೆಗೆ ನೀರು ಹಾಯಿಸಲು ನಿರ್ಮಿಸಲಾಗಿರುವ ತಡೆಗೋಡೆ ನಿರ್ಮಿಸಲಾಗಿತ್ತು. ಲಿಂಗನಮಕ್ಕಿ ಪವರ್ ಚಾನಲ್ ಗೆ ಹೆಚ್ಚುವರಿಯಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯ ಕೈಗೊಳ್ಳಲು ರೂ 4.85 ಕೋಟಿ ವೆಚ್ಛದಲ್ಲಿ ಟೆಂಡರ್ ಕರೆಯಲಾಗಿತ್ತು. 2022 ರಲ್ಲಿ ದಾವುಲ್ ಸಾಬ್ ಕಮ್ಮಟಗಿ ಎಂಬ ಗುತ್ತಿಗೆದಾರರು ಸದರಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆಯ ಮೂಲಕ ಕೈಗೊಂಡಿದ್ದರು. ಎರಡೂ ದಂಡೆಯಲ್ಲಿ ನಿರ್ಮಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಪೂರ್ಣಗೊಂಡ 6 ತಿಂಗಳೊಳಗೆ ಕುಸಿತ ಕಂಡಿತ್ತು.

ಬಹು ಕೋಟಿ ವೆಚ್ಛದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ತಡೆಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ. ವಿಜಯಕುಮಾರ್ ಬೆಂಗಳೂರಿನ ಲೋಕಾಯುಕ್ತರ ಕಾರ್ಯಾಲಯದಲ್ಲಿ ದೂರು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.

ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ, ಪರಿಶೀಲನೆ

ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಲು ಲೋಕಾಯುಕ್ತ ಕಾರ್ಯಾಲಯದ ಮುಖ್ಯ ಎಂಜಿನಿಯರ್ ಕಛೇರಿಯ ಅಧಿಕಾರಿಗಳ ತಂಡ ಪರಮೇಶ್ ನೇತೃತ್ವದಲ್ಲಿ ಸೋಮವಾರ ಕಾರ್ಗಲ್ ಪಟ್ಟಣದಲ್ಲಿರುವ ಕೆಪಿಸಿ ಅಧೀಕ್ಷಕ ಎಂಜಿನಿಯರ್ ಕಛೇರಿಯಲ್ಲಿ ಕೆಪಿಸಿ ಅಧಿಕಾರಿಗಳ ಅಹವಾಲು ಮತ್ತು ದೂರುದಾರರ ಅಹವಾಲುಗಳನ್ನು ಕೇಳಿ ದಾಖಲಿಸಿದರು. ಮುಂದುವರಿದು ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ಲಿಂಗನಮಕ್ಕಿ ಜಲಾಶಯದ ಸ್ಲ್ಯೂಸ್ ಗೇಟ್ ಮುಂಭಾಗದಲ್ಲಿ ನುರಿತ ತಜ್ಞರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಅನಾಹುತಕ್ಕೂ ಮುನ್ನಾ ಎಚ್ಚೆತ್ತುಕೊಳ್ಳುವಂತೆ ಮನವಿ

ಅತಿ ಶೀಘ್ರದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ಹೊರ ಹಾಯಿಸಲಾಗುತ್ತಿರುವ ನೀರನ್ನು ತಡೆದು ಸ್ಲ್ಯೂಸ್ ಗೇಟ್ ಮುಂಭಾಗದ ಪವರ್ ಚಾನಲ್ ತಳಭಾಗದಲ್ಲಿ ಆಗಿರಬಹುದಾದ ಅನಾಹುತಗಳನ್ನು ಪರಿಶೀಲನೆ ನಡೆಸಲು ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಆಗಮಿಸಲಿದೆ ಎಂದು ದೂರುದಾರ ಕೆ. ವಿಜಯಕುಮಾರ್ ಮಾಹಿತಿ ನೀಡಿದರು.

BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ

ಚಳಿಗಾಲದ ಹಿನ್ನಲೆ: ಬದರಿನಾಥ ಧಾಮ ಯಾತ್ರೆ ಬಂದ್ | Badrinath Dham

Share. Facebook Twitter LinkedIn WhatsApp Email

Related Posts

ಕಾಲು ಬೆರಳಿಗೆ ಕಪ್ಪು ದಾರ: ಮಹಿಳೆಯರ ಈ ಸಮಸ್ಯೆಗೆ ರಾಮಬಾಣ ಈ ಪುಟ್ಟ ಉಪಾಯ !

26/02/2026 12:02 PM2 Mins Read

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

26/02/2026 11:48 AM2 Mins Read

Chandra Grahan 2026 : ಮಾ.3ಕ್ಕೆ ವರ್ಷದ ಮೊದಲ `ಚಂದ್ರಗ್ರಹಣ’ : ಭಾರತದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಮಾಹಿತಿ

26/02/2026 11:37 AM1 Min Read
Recent News

ಕಾಲು ಬೆರಳಿಗೆ ಕಪ್ಪು ದಾರ: ಮಹಿಳೆಯರ ಈ ಸಮಸ್ಯೆಗೆ ರಾಮಬಾಣ ಈ ಪುಟ್ಟ ಉಪಾಯ !

26/02/2026 12:02 PM

ತಪ್ಪಿಗೆ ಹೊಣೆ ಯಾರು?: ಎನ್‌ಸಿಇಆರ್‌ಟಿ ಪುಸ್ತಕದ ವಿವಾದಾತ್ಮಕ ಅಂಶಗಳ ಬಗ್ಗೆ ಆಳವಾದ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

26/02/2026 12:02 PM

ಜನಸಾಮಾನ್ಯರಿಗೆ ಬಿಗ್ ರಿಲೀಫ್ : `ಅಡುಗೆ ಎಣ್ಣೆ’ ಬೆಲೆಯಲ್ಲಿ ಇಳಿಕೆ | Cooking Oil Price Cut

26/02/2026 11:51 AM

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

26/02/2026 11:48 AM
State News
KARNATAKA

ಕಾಲು ಬೆರಳಿಗೆ ಕಪ್ಪು ದಾರ: ಮಹಿಳೆಯರ ಈ ಸಮಸ್ಯೆಗೆ ರಾಮಬಾಣ ಈ ಪುಟ್ಟ ಉಪಾಯ !

By kannadanewsnow5726/02/2026 12:02 PM KARNATAKA 2 Mins Read

ಹಿಂದೂ ಧರ್ಮದಲ್ಲಿ ಕೆಟ್ಟ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಕಪ್ಪು ದಾರವನ್ನು ಬಳಸುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ಮನೆಯ ಹಿರಿಯರು ಮಕ್ಕಳಿಗೆ…

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

26/02/2026 11:48 AM

Chandra Grahan 2026 : ಮಾ.3ಕ್ಕೆ ವರ್ಷದ ಮೊದಲ `ಚಂದ್ರಗ್ರಹಣ’ : ಭಾರತದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಮಾಹಿತಿ

26/02/2026 11:37 AM

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ : ಗೃಹ ಇಲಾಖೆಯಲ್ಲಿ 17 ಸಾವಿರ ನೇಮಕಾತಿಗೆ ಅನುಮತಿ : ಜಿ.ಪರಮೇಶ್ವರ್

26/02/2026 11:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.