Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಹೀಗಿವೆ `ಕರ್ನಾಟಕದ ಸೈಬರ್ ಪೊಲೀಸ್ ಠಾಣೆ’ಗಳ ದೂರವಾಣಿ ಸಂಖ್ಯೆ.!

14/05/2025 9:32 AM

BREAKING: ಭಾರತೀಯ ಸೇನೆಯಿಂದ ‘ಆಪರೇಷನ್ ಕೆಲ್ಲರ್’ ಕಾರ್ಯಾಚರಣೆ ಆರಂಭ : ಎನ್ಕೌಂಟರ್ ನಲ್ಲಿ ಮೂವರು ಲಷ್ಕರ್ ಉಗ್ರರ ಹತ್ಯೆ | OPERATION KELLER

14/05/2025 9:28 AM

SHOCKING : ದೇಶದ‍ಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ಲವರ್ ಜೊತೆ ಸೇರಿ ಪತಿಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಎಸೆದ ಪಾಪಿ ಪತ್ನಿ.!

14/05/2025 9:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಇಂದು ‘ವ್ಯಸನ ಮುಕ್ತ ದಿನಾಚರಣೆ’ : ಇದರ ಇತಿಹಾಸ, ಮಹತ್ವ ತಿಳಿಯಿರಿ.!
KARNATAKA

ರಾಜ್ಯದಲ್ಲಿ ಇಂದು ‘ವ್ಯಸನ ಮುಕ್ತ ದಿನಾಚರಣೆ’ : ಇದರ ಇತಿಹಾಸ, ಮಹತ್ವ ತಿಳಿಯಿರಿ.!

By kannadanewsnow5701/08/2024 9:09 AM

ಬೆಂಗಳೂರು : ಬಾಗಲಕೋಟೆಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯದಲ್ಲಿ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು.

 ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆಗಸ್ಟ್ 1 ರಂದು ಜನಿಸಿದ ಅವರು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು.

 ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ವ್ಯಸನ ಮುಕ್ತ ಸಮಾಜ’ ನಿರ್ಮಾಣಕ್ಕೆ 1975 ರಿಂದ ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದರು. ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನ ಹೊಂದಿದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.

ಮದ್ಯಪಾನ ಸ್ಮಶಾನಕ್ಕೆ ಆಹ್ವಾನ:

ವಿಶ್ವಾದ್ಯಂತ ಮದ್ಯ ಸೇವನೆಯಿಂದ 2.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ 2 ಮಿಲಿಯನ್ ಪುರುಷರು ಮತ್ತು 0.6 ಮಿಲಿಯನ್ ಮಹಿಳೆಯರು. ಅತಿ ಹೆಚ್ಚು ಆಲ್ಕೊಹಾಲ್ ಸೇವನೆಯಿಂದ ಸಾವು ಸಂಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ 52.2 ಸಾವುಗಳು 2019 ವರದಿ ಪ್ರಕಾರ ಕಂಡು ಬಂದಿದೆ ಎಂದು ತಿಳಿಸಿದೆ. ಕಿರಿಯ ವಯಸ್ಸಿನ (20-39 ವರ್ಷಗಳು) ಜನರು ಆಲ್ಕೋಹಾಲ್ ಸೇವನೆಯಿಂದ ಗುಲಾಮರಾಗಿದ್ದು ಈ ವಯೋಮಾನದಲ್ಲಿ ಆಲ್ಕೋಹಾಲ್‌ನಿಂದ (13%) ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ಕಂಡು ಬಂದಿದೆ.

ವ್ಯಸನ ಮರಣ ಶಾಸನ:

 ಇಂದು ವಿಶ್ವಾದ್ಯಂತ ಮಾದಕವಸ್ತು ಸೇವನೆಯಿಂದ 2019ರ ವರದಿ ಪ್ರಕಾರ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಾಪ್ಪಿದ್ದಾರೆ. ಈ ಸಾವುಗಳಲ್ಲಿ ಸುಮಾರು 80% ನಷ್ಟು ಅಫೀಮು ಸಂಬAಧಿಸಿದೆ. ಅದರಲ್ಲಿ ಸುಮಾರು 25% ನಷ್ಟು ಅಫೀಮು ಮಿತಿ ಮೀರಿದ ಸೇವನೆಯಿಂದ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, 2019 ರಲ್ಲಿ ಅಫೀಮು ಮಿತಿ ಮೀರಿದ ಸೇವನೆಯಿಂದ ಸುಮಾರು 1.5 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಬದುಕನ್ನು ಸುಡುವ ತಂಬಾಕು:

ತAಬಾಕು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ಪ್ರಪಂಚದಾದ್ಯAತ ವರ್ಷಕ್ಕೆ 8 ಮಿಲಿಯನ್ ಜನರು ಸಾವನ್ನುಪ್ಪುತ್ತಿದ್ದಾರೆ. ಇದರಲ್ಲಿ ನೇರ ತಂಬಾಕು ಸೇವನೆಯ 7 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾಯುತ್ತಿದ್ದಾರೆ. ಸುಮಾರು 1.3 ಮಿಲಿಯನ್ ವ್ಯಕ್ತಿಗಳು ನೇರವಾಗಿ ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆೆ.

ತಂಬಾಕು ಸೇವನೆಯಲ್ಲಿ ಭಾರತವು ಜಾಗತಿಕವಾಗಿ 2 ನೇ ಸ್ಥಾನದಲ್ಲಿದ್ದು ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಸಾಯುತ್ತಾರೆ. ಒಟ್ಟಾರೆ 9.5% ರಷ್ಟು ಸಾವುಗಳು ಭಾರತವು ಧೂಮಪಾನ ಮತ್ತು ನೇರ ತಂಬಾಕು ಬಳಕೆಯಿಂದ ಸಾಯುತ್ತಿದ್ದಾರೆ ಎಂದು ವರದಿಯಾಗಿದ್ದು 253 ಮಿಲಿಯನ್ ಜನರು ಭಾರತದಲ್ಲಿ ತಂಬಾಕು ಬಳಕೆ ಮಾಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಎಸ್‌ಇಎಆರ್) ತಿಳಿಸಿದೆ.

ವಿಶ್ವದಲ್ಲಿ ದೂಪಪಾನ, ಮದ್ಯಪಾನ ಮಾತ್ರವಲ್ಲದೇ ಅನೇಕ ರೀತಿಯ ವ್ಯಸನಗಳಿಂದ ಇಂದಿನ ಯುವ ಜನತೆ ದಾರಿ ತಪ್ಪುತ್ತಿದ್ದು ತಮ್ಮ ಜೀವನವನ್ನು ನಶೆಯಲ್ಲಿ ನಾಶ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ 70 ರ ದಶದಲ್ಲಿಯೇ ಮಹಾಂತ ಸ್ವಾಮಿಜಿ ಅವರು ಮಾಡಿದ ಸಾಮಾಜಿಕ ಕ್ರಾಂತಿ ಅತ್ಯಂತ ವಿಶೇಷವಾದದ್ದು.

ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ:

ಡಾ.ಮಹಾಂತ ಶಿವಯೋಗಿ ಸ್ವಾಮಿಜಿ ಜಾತಿ, ಮತ, ಪಂಗಡ, ಧರ್ಮ, ಭಾಷೆ ಗಳನ್ನು ಮೀರಿ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆAಡ್ ಸೇರಿದಂತೆ ವಿದೇಶದಲ್ಲೂ ಮಹಾಂತರು ತಮ್ಮ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

 ವ್ಯಸನವು ದೇಹಕ್ಕೆ ಮತ್ತು ದೇಶಕ್ಕೆ ಮಾರಕವಾಗಿದೆ ಎಂದು ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ ನಿರ್ಮಾಣ, ಕುಟುಂಬ, ಸಮಾಜ, ಗ್ರಾಮಗಳ ಕಲ್ಯಾಣದ ಪರಿಕಲ್ಪನೆ ಇಟ್ಟುಕೊಂಡು ಜೋಳಿಗೆ ಕಾರ್ಯಕ್ರಮದ ಮೂಲಕ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು,ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಜಾಗೃತಿ ಮೂಡಿಸುವ ಮೂಲಕ ವ್ಯಸನಗಳಿಂದ ಮನಪರಿವರ್ತನೆ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುವಂತೆ ಮಾಡಿದ್ದರು.

 ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನ ಆಗಸ್ಟ್ 1 ರಂದು ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದ್ದು ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.

'Addiction Free Day' to be observed in Karnataka tomorrow: Know its history significance ಮಹತ್ವ ತಿಳಿಯಿರಿ ರಾಜ್ಯದಲ್ಲಿ ನಾಳೆ ‘ವ್ಯಸನ ಮುಕ್ತ ದಿನಾಚರಣೆ’ : ಇದರ ಇತಿಹಾಸ
Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ಹೀಗಿವೆ `ಕರ್ನಾಟಕದ ಸೈಬರ್ ಪೊಲೀಸ್ ಠಾಣೆ’ಗಳ ದೂರವಾಣಿ ಸಂಖ್ಯೆ.!

14/05/2025 9:32 AM1 Min Read

BIG NEWS : ಒಂದು ಮೊಬೈಲ್ ಸಂಖ್ಯೆಗೆ ಎಷ್ಟು `ಆಧಾರ್ ಕಾರ್ಡ್‌’ಗಳನ್ನು ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

14/05/2025 8:04 AM2 Mins Read

BREAKING: ಬೆಂಗಳೂರಲ್ಲಿ `ಆಪರೇಷನ್ ಸಿಂಧೂರ್’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಯುವಕ ಅರೆಸ್ಟ್.!

14/05/2025 7:37 AM1 Min Read
Recent News

ಸಾರ್ವಜನಿಕರೇ ಗಮನಿಸಿ : ಹೀಗಿವೆ `ಕರ್ನಾಟಕದ ಸೈಬರ್ ಪೊಲೀಸ್ ಠಾಣೆ’ಗಳ ದೂರವಾಣಿ ಸಂಖ್ಯೆ.!

14/05/2025 9:32 AM

BREAKING: ಭಾರತೀಯ ಸೇನೆಯಿಂದ ‘ಆಪರೇಷನ್ ಕೆಲ್ಲರ್’ ಕಾರ್ಯಾಚರಣೆ ಆರಂಭ : ಎನ್ಕೌಂಟರ್ ನಲ್ಲಿ ಮೂವರು ಲಷ್ಕರ್ ಉಗ್ರರ ಹತ್ಯೆ | OPERATION KELLER

14/05/2025 9:28 AM

SHOCKING : ದೇಶದ‍ಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ಲವರ್ ಜೊತೆ ಸೇರಿ ಪತಿಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಎಸೆದ ಪಾಪಿ ಪತ್ನಿ.!

14/05/2025 9:08 AM

ಕೆನಡಾದ ಮೊದಲ ಹಿಂದೂ ವಿದೇಶಾಂಗ ಸಚಿವೆಯಾಗಿ ಅನಿತಾ ಆನಂದ್ ಪ್ರಮಾಣ ವಚನ ಸ್ವೀಕಾರ | Anita anand

14/05/2025 9:00 AM
State News
KARNATAKA

ಸಾರ್ವಜನಿಕರೇ ಗಮನಿಸಿ : ಹೀಗಿವೆ `ಕರ್ನಾಟಕದ ಸೈಬರ್ ಪೊಲೀಸ್ ಠಾಣೆ’ಗಳ ದೂರವಾಣಿ ಸಂಖ್ಯೆ.!

By kannadanewsnow5714/05/2025 9:32 AM KARNATAKA 1 Min Read

ಬೆಂಗಳೂರು: ರಾಜ್ಯದ ಜನರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಿಂದ ರಾಜ್ಯದ ಎಲ್ಲಾ ಸೈಬರ್ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ…

BIG NEWS : ಒಂದು ಮೊಬೈಲ್ ಸಂಖ್ಯೆಗೆ ಎಷ್ಟು `ಆಧಾರ್ ಕಾರ್ಡ್‌’ಗಳನ್ನು ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

14/05/2025 8:04 AM

BREAKING: ಬೆಂಗಳೂರಲ್ಲಿ `ಆಪರೇಷನ್ ಸಿಂಧೂರ್’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಯುವಕ ಅರೆಸ್ಟ್.!

14/05/2025 7:37 AM

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

14/05/2025 7:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.