ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ತಗಲಾಕೊಂಡಿರೋ ನಟಿ ರನ್ಯಾ ರಾವ್ ಅವರೊಂದಿಗೆ ರಾಜಕೀಯ ವ್ಯಕ್ತಿಗಳ ನಂಟಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲೇ ಆಕೆ ನಿರ್ದೇಶಕಿಯಾಗಿರುವಂತ ಕಂಪನಿಗೆ ಹಿಂದಿನ ಸರ್ಕಾದ ಅವಧಿಯಲ್ಲಿ ಬರೋಬ್ಬರಿ 12 ಎಕರೆ ಜಮೀನು ಮಂಜೂರಾಗಿದೆ. ಅದೂ ದೇವನಹಳ್ಳಿ ಸಮೀಪದಲ್ಲಿ.
ಹೌದು ನಟಿ ರನ್ಯಾ ರಾವ್ ಅವರಿಗೂ ರಾಜಕೀಯ ವ್ಯಕ್ತಿಗಳ ನಂಟಿರುವುದು ಬಯಲಾಗಿದೆ. ಚಿನ್ನ ಕಳ್ಳ ಸಾಗಾಣಿಕೆ ಕೇಸಲ್ಲಿ ಸಿಕ್ಕಿಬಿದ್ದಿರುವಂತ ನಟಿ ಹರ್ಷವರ್ಧಿನಿ ರಾವ್ ಅವರು ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಅವರು ನಿರ್ದೇಶಕಿಯಾಗಿರುವಂತ ಕ್ಲಿರೋದಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಹಿಂದಿನ ಸರ್ಕಾರದ ಅವಧಿಯಲ್ಲಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಫೆಬ್ರವರಿ 22, 2023ರಲ್ಲಿ ನಟಿ ರನ್ಯಾ ರಾವ್ ಒಡೆತನದ ಕ್ಸಿರೋದಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ದೇವನಹಳ್ಳಿ ಸಮೀಪವೇ ಬರೋಬ್ಬರಿ 12 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಐಡಿಎಬಿಯಿಂದ ಮಂಜೂರು ಮಾಡಿರುವುದು ದಾಖಲೆ ಪತ್ರದಿಂದ ತಿಳಿದು ಬಂದಿದೆ.
ತೆಲಂಗಾಣದಲ್ಲಿ ಎಸ್ಎಲ್ಬಿಸಿ ಸುರಂಗದೊಳಗೆ ಸಿಕ್ಕಿಬಿದ್ದ ಓರ್ವ ಕಾರ್ಮಿಕನ ಶವ 2 ವಾರಗಳ ನಂತರ ಪತ್ತೆ
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!