ಬಳ್ಳಾರಿ: ಕೆಲ ದಿನಗಳ ಹಿಂದೆ ನಟ ಯಶ್ ಹುಟ್ಟು ಹಬ್ಬದ ಪ್ಲೆಕ್ಸ್ ಕಟ್ಟೋ ವೇಳೆಯಲ್ಲಿ ವಿದ್ಯುತ್ ಹರಿದು ಯಶ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಇಂದು ಯಶ್ ಅಭಿಮಾನಿಯ ಕಾಲಿನ ಮೇಲೆ ಅವರ ಬೆಂಗಾವಲು ವಾಹನದ ಕಾರು ಹರಿದು ಕಾಲಿಗೆ ಗಾಯವಾಗಿರೋ ಘಟನೆ ನಡೆದಿದೆ.
ಇಂದು ನಟ ಯಶ್ ಅವರು ಬಳ್ಳಾರಿಗೆ ಅಮೃತೇಶ್ವರ ಸ್ವಟಿಕ ಲಿಂಗ ದೇಗುಲದ ಉದ್ಘಾಟನೆಗೆ ತೆರಳಿದ್ದರು. ದೇವಾಲಯ ಉದ್ಘಾಟನೆ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಂತ ವೇಳೆಯಲ್ಲಿ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ ನ ಬಳಿಯಲ್ಲಿ ಅವರ ಬೆಂಗಾವಲು ವಾಹನದ ಕಾರು ಅಭಿಮಾನಿಯೊಬ್ಬರ ಕಾಲಿನ ಮೇಲೆ ಹರಿದಿದೆ.
ನಟ ಯಶ್ ಅಭಿಮಾನಿಯಾಗಿರುವಂತ ಸಿರಗುಪ್ಪದ ವಸಂತ್ ಎಂಬುವರು ಯಶ್ ನೋಡಲು ಅವರನ್ನೇ ಹಿಂಬಾಲಿಸಿಕೊಂಡು ತೆರಳಿದ್ದರು. ಈ ವೇಳೆಯಲ್ಲಿ ಬಳ್ಳಾರಿ ಹೊರವಲಯದ ಬಾಲಾಜಿ ಕ್ಯಾಂಪ್ ಬಳಿಯಲ್ಲಿ ಯಶ್ ಬೆಂಗಾವಲು ಕಾರು ಅವರ ಕಾಲಿನ ಮೇಲೆ ಹರಿದು, ಗಾಯಗೊಂಡಿದ್ದಾರೆ. ಇದೀಗ ರಕ್ತ ಸುರಿಯುತ್ತಿದ್ದಂತ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪಾಕಿಸ್ತಾನದ ಪರ ಘೋಷಣೆ ಕೂಗಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್
‘ಜಾತಿ ಗಣತಿ’ ವರದಿ ಸಲ್ಲಿಕೆಯಿಂದ ಸರ್ವ ಜನಾಂಗಕ್ಕೂ ಒಳ್ಳೆಯದಾಗುತ್ತದೆ :ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು