ಬೆಂಗಳೂರು: ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ನೀಡಿರುವಂತ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಸ್ಯಾಂಡಲ್ ವುಡ್ ನಿಂದ ನಿಷೇಧಿಸಬೇಕು ಎನ್ನುವಂತ ಒತ್ತಾಯ ಕೂಡ ಹೆಚ್ಚಾಗಿದೆ. ಇದರ ನಡುವೆ ಕನ್ನಡ ತಮಿಳಿನಿಂದ ಹುಟ್ಟಿದ್ದೆಂದ ನಟ ಕಮಲ್ ಹಾಸನ್ ಮಾತು ಒಪ್ಪೋಲ್ಲ ಅಂತ ನಟ ಜಗ್ಗೇಶ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕಲೆಗೆ ಜಾತಿ ಇಲ್ಲಾ.ಎಲ್ಲಾಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ,ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಮೆಚ್ಚಿದ್ದೇವೆ. ಅಂದ ಮಾತ್ರಕ್ಕೆ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪೋಲ್ಲಾ! ಅಂತ ತಿಳಿಸಿದ್ದಾರೆ.
ಕನ್ನಡಕ್ಕೆ 2.5ಸಾವಿರ ವರ್ಷದ ಇತಿಹಾಸವಿದೆ,ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್..! ಎಂದಿದ್ದಾರೆ.
ಕಲೆಗೆ ಜಾತಿ ಇಲ್ಲಾ.ಎಲ್ಲಾಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ,ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಮೆಚ್ಚಿದ್ದೇವೆ.
ಅಂದ ಮಾತ್ರಕ್ಕೆ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪೋಲ್ಲಾ!
ಕನ್ನಡಕ್ಕೆ 2.5ಸಾವಿರ ವರ್ಷದ ಇತಿಹಾಸವಿದೆ,ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್..! pic.twitter.com/Bj8f59lAiK— ನವರಸನಾಯಕ ಜಗ್ಗೇಶ್ (@Jaggesh2) May 28, 2025
BIG NEWS: 2ನೇ ಬಾರಿಗೆ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರ ಮೀಸಲಾತಿ ವಿಧೇಯಕ ವಾಪಾಸ್ ಕಳುಹಿಸಿದ ರಾಜ್ಯಪಾಲರು
ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill