ಬೆಂಗಳೂರು: ನನಗೆ ಜೈಲೂಟ ಒಗ್ಗುತ್ತಿಲ್ಲ. ಜೊತೆಗೆ ದೇಹದ ತೂಕ ಬೇರೆ ಕಡಿಮೆ ಆಗುತ್ತಿದೆ. ಮನೆ ಊಟಕ್ಕೆ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ನಟ ದರ್ಶನ್ ಸಲ್ಲಿಸಿದ್ದರು. ಇಂತಹ ರಿಟ್ ಅರ್ಜಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ.
ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಜೈಲೂಟ ಸೇರುತ್ತಿಲ್ಲ. ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ತಮ್ಮ ಪರ ವಕೀಲರ ಮೂಲಕ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು.
ಮನೆಯಿಂದ ಊಟ, ಹಾಸಿಗೆ, ಪುಸ್ತಕ ಕೋರಿ ನಟ ದರ್ಶನ್ ಸಲ್ಲಿಸಿದ್ದಂತ ರಿಟ್ ಅರ್ಜಿಯನ್ನು ವಿಚಾರಣೆಗೆ ಹೈಕೋರ್ಟ್ ಕೈಗೆತ್ತಿಕೊಳ್ಳುತ್ತಿದ್ದಂತೇ, ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಿತು.
ನ್ಯಾಯಾಂಗ ಬಂಧನಕ್ಕೆ ವಹಿಸುವಾಗ ಅನಾರೋಗ್ಯದ ಅಹವಾಲು ಸಲ್ಲಿಸುವಂತಿಲ್ಲ. ವಿಶೇಷ ಆಹಾರ ಅಗತ್ಯದ ಬಗ್ಗೆ ಮ್ಯಾಜಿಸ್ಟ್ರೇಟ್ ತಿಳಿಸಿಲ್ಲ. ಜೈಲು ಅಧಿನಿಯಮ 1963ರ ಸೆ.30ರಂತೆ ನಟ ದರ್ಶನ್ ಅವರು ಇನ್ಸ್ ಪೆಕ್ಟರ್ ಜನರಲ್ ಅವರಿಗೆ ಅನುಮತಿಯನ್ನು ಕೇಳಿಲ್ಲ ಅಂತ ಆಕ್ಷೇಪಿಸಿತು.
ಅರ್ಹತೆ ಅನುಸಾರವಾಗಿ ಜೈಲಿನ ಐಜಿಯವರು ಸೂಕ್ತ ಆದೇಶ ನೀಡುತ್ತಾರೆ. ಜೈಲು ನಿಯಮಾವಳಿಯಂತೆ ಖೈತಿಗಳಿಗೆ ಅಗತ್ಯ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂಬುದಾಗಿ ನಟ ದರ್ಶನ್ ಅವರ ಮನೆಯೂಟ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದೆ. ಹೀಗಾಗಿ ಹೈಕೋರ್ಟ್ ನಟ ದರ್ಶನ್ ಅವರಿಗೆ ಮನೆಯೂಟವನ್ನು ತರಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಾ ಅಂತ ಕಾದು ನೋಡಬೇಕಿದೆ.
ಸಿಎಂ ಸಿದ್ದರಾಮಯ್ಯ ‘ಬಿಸ್ಕೆಟ್’ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ : ಮಾಜಿ ಸಂಸದ ಮುನಿಸ್ವಾಮಿ ಕಿಡಿ