ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕುರಿತಂತೆ ಅಸಭ್ಯವಾಗಿ ಕಾಮೆಂಟ್ ಮಾಡಿದಂತ ಐದು ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಟಿವಿ14 ಎನ್ನುವಂತ ಯೂಟ್ಯೂಬ್ ಚಾನಲ್ ನಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕುರಿತಾಗಿ ವೀಡಿಯೋ ಪ್ರಸಾರವಾಗಿತ್ತು. ಈ ವೀಡಿಯೋಗೆ ಅಶ್ಲೀಲವಾಗಿ ಕಾಮೆಂಟ್ ಗಳನ್ನು ಕೆಲವರು ಮಾಡಿದ್ದರು. ಈ ಹಿನ್ನಲೆಯಲ್ಲಿ ಮಹಿಳಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಬಿಆರ್ ಭಾಸ್ಕರ್ ಪ್ರಸಾದ್ ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ್ದಂತ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಗೆ ಪತ್ರ ಬರೆದು, ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಿಕೆ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಐವರು ಯೂಟ್ಯೂಬ್ ಗಳ ವಿರುದ್ಧ ಅಶ್ಲೀಲವಾಗಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರ ದೂರಿನಲ್ಲಿ ಏನಿದೆ.?
ಪಿರ್ಯಾದುದಾರರಾದ ಲೋಕೇಶ್ ಕೆ ಹೆಚ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರು ದಿನಾಂಕ: 27/08/2025 ರಂದು ನೀಡಿದ ದೂರಿನ ಸಂಕ್ಷೀಪ್ತ ಸಾರಾಂಶವೇನೆಂದರೆ, ತಾನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈಗೆ ಸುಮಾರು 2 ವರ್ಷಗಳಿಂದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯನಿರ್ವಹಿಸಿಕೊಂಡಿದ್ದು ಕರ್ತವ್ಯದ ಜೊತೆಯಲಿ ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಇನ್ಸಾರ್ಜ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ, ಸದರಿ ಸೆಲ್ ನಲ್ಲಿ ಠಾಣಾ ಸಿಬ್ಬಂದಿಗಳಾದ ಕಿರಣ್ ಕುಮಾರ್ ಪಿಸಿ-20106 ಮತ್ತು ಸುರೇಶ್ ಜಾಲಳ್ಳಿ, ಪಿಸಿ-21798 ರವರು ಸಹ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ.
ಈಗಿರುವಾಗ ಈ ದಿನ ದಿನಾಂಕ: 27/08/2025 ರಂದು ಗಣೇಶ ಹಬ್ಬದ ಪ್ರಯಕ್ತ ಠಾಣಾ ಸರಹದ್ದಿನಲ್ಲಿ, ವಿಶೇಷ ಗಸ್ತಿನಲಿರುವಾಗ, ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನಲ್ಲಿ, ಕರ್ತವ್ಯ ನಿರ್ವಹಿಸಿಕೊಂಡಿರುವ ಠಾಣಾ ಸಿಬ್ಬಂದಿಯವರಾದ ಕಿರಣ್ ಕುಮಾ ಪಿಸಿ-20106 ರವರು ಸಂಪರ್ಕಿಸಿ, ಸಂಜೆ ಸೋಷಿಯಲ್ ಮೀಡಿಯಾ ವೀಕ್ಷಣೆ ಮಾಡುತ್ತಿರುವಾಗ ಈ ದಿನ TV14 ಎಂಬ ಸೋಷಿಯಲ್ ಮೀಡಿಯಾದಲ್ಲಿ, “ ದರ್ಶನ್ ಪತ್ನಿಯ ಮೇಲೆ ಅಟ್ಯಾಕ್! ” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿರೂಪಕರು ಸುಮಾರು 16 ನಿಮಿಷಗಳ ವಿಡಿಯೋವನ್ನು ಪ್ರಸಾರ ಮಾಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ನಾನು ಸದರಿ ಯೂಟ್ಯೂಬ್ ಚಾನೆಲ್ ಅನ್ನು ನೋಡಲಾಗಿ ಸದರಿ ಶೀರ್ಷಿಕೆಯ ವಿಡಿಯೋದಲ್ಲಿ ಹಲವಾರು ಗ್ರೀನ್ ಶಾಟ್ ಗಳನ್ನು ನಿರೂಪಕರು ಪ್ರಸಾರ ಮಾಡಿರುತ್ತಾರೆ. ಅವುಗಳಲ್ಲಿ, ವಿಜಯಲಕ್ಷ್ಮಿ ಎಂಬ ಮಹಿಳೆಗೆ ಸೂಳೆ, ಡಗಾರ್, ಕೆಯುತ್ತಿನಿ ಎಂಬಿತ್ಯಾದಿಯಾಗಿ ಅವಾಚ್ಯ ಪದಗಳನ್ನು ಬಳಸಿರುವುದು ಕಂಡುಬಂದಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ನಾನು ಸಹ ಸದರಿ ವಿಡಿಯೋವನ್ನು ನೋಡಲಾಗಿ ದರ್ಶನ್ ಪತ್ನಿಯ ಮೇಲೆ ಅಟಾಕ್ ಎಂಬ ಶೀರ್ಷಿಕೆಯಡಿಯಲಿ., ನ್ಯೂಸ್ ಒಂದು ಯೂಟ್ಯೂಬ್ ನಲ್ಲಿ URL Link : https://youtu.be/ceSPkcXSXZl?si=WiuzzQle2opmxc_p” ಪ್ರಸಾರವಾಗಿದ್ದು, ಅದರಲ್ಲಿ ಪ್ರಸಾರವಾದ ಸ್ತ್ರೀನ್ ಶಾಟ್ ಗಳಲಿ 1) DODDAMANE SOL…, 2) POWERISM 3) SF, 4) mann Off Masssesss… 5) appu_cultz_official and b… 6) uneducated@DevilM6755… ಎಂಬ ಟ್ವಿಟರ್ ಖಾತೆಗಳಲ್ಲಿ, ವಿಜಯಲಕ್ಷ್ಮೀ ಎಂಬ ಮಹಿಳೆಯ ಬಗ್ಗೆ ಸೂಳೆ, ಡಗಾರ್, ಕೆಯುತ್ತಿನಿ ಎಂಬ ಅವಾಚ್ಯ ಶಬ್ದಗಳನ್ನು ಬಳಸಿರುವುದು ಮತ್ತು ಅಸಭ್ಯ ಪೋಟೋಗಳನ್ನು ಹಾಕಿರುವುದು ಕಂಡುಬದದಿರುತ್ತದೆ.
ಸದರಿ ಟ್ವಿಟರ್ ಖಾತೆಗಳನ್ನು ಬಳಸಿ ಸೋಷಿಯಲ್ ಮೀಡಿಯಾದಲ್ಲಿ, ಶ್ರೀಮತಿ ವಿಜಯಲಕ್ಷ್ಮೀ ಎಂಬ ಮಹಿಳೆಗೆ ಅವಾಚ್ಯ ಶಬ್ದಗಳನ್ನು ಬಳಸಿರುವುದು ಮತ್ತು ಅಸಭ್ಯ ಪೋಟೋಗಳನ್ನು ಹಾಕಿರುವವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.